ಐ-ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್ ಸಿ ತಂಡ (ಸಂಗ್ರಹ ಚಿತ್ರ)
ಐ-ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್ ಸಿ ತಂಡ (ಸಂಗ್ರಹ ಚಿತ್ರ)

ಮತ್ತೊಂದು ಜಯದ ನಿರೀಕ್ಷೆಯಲ್ಲಿ ಬಿಎಫ್ ಸಿ

ಕೆಟ್ಟ ಆರಂಭದ ನಂತರ ಮತ್ತೆ ಗೆಲವಿನ ಹಾದಿಗೆ ಮರಳಿರುವ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಐ-ಲೀಗ್...

ಬೆಂಗಳೂರು: ಕೆಟ್ಟ ಆರಂಭದ ನಂತರ ಮತ್ತೆ ಗೆಲವಿನ ಹಾದಿಗೆ ಮರಳಿರುವ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಐ-ಲೀಗ್ ಟೂರ್ನಿಯಲ್ಲಿ ತನ್ನ ಜಯದ ಲಯವನ್ನು ಮುಂದುವರಿಸುತ್ತ ಗಮನ ಹರಿಸಿದೆ.

ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್ ಸಿ ತಂಡ ಶಿಲ್ಲಾಂಗ್ ಲಾಜೊಂಗ್ ವಿರುದ್ಧ ಸೆಣಸಲಿದ್ದು, ಮತ್ತೊಂದು ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಲು ಸಜ್ಜಾಗಿದೆ. ಈ ಎರಡೂ ತಂಡಗಳು ಈವರೆಗೂ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆ ಪೈಕಿ ಎರಡರಲ್ಲಿ ಬಿಎಫ್ ಸಿ ಗೆಲವು ದಾಖಲಿಸಿದೆ. ಆ ಎರಡೂ ಪಂದ್ಯಗಳನ್ನು ತವರಿನ ಅಂಗಣದಲ್ಲೇ ಗೆದ್ದಿದೆ. ಈಗಲೂ ತವರಿನ ಅಂಗಣದಲ್ಲಿ  ನಡೆಯಲಿರುವ ಹಣಾಹಣಿಯಲ್ಲಿ ಗೆದ್ದು ಬೀಗಲು ಸಿದ್ಧವಾಗಿದೆ.

ಇಷ್ಟು ದಿನಗಳವರೆಗೂ ನಾಯಕ ಸುನೀಲ್ ಛೆಟ್ರಿ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಬೆಂಗಳೂರು ಎಫ್ ಸಿ, ತನ್ನ ಕಳೆದೆರಡು ಪಂದ್ಯದಲ್ಲಿ ಹೊಸ ಹಿರೋ ಕಂಡುಕೊಂಡಿದೆ. ಎಎಫ್ ಸಿ ಚಾಂಪಿಯನ್ಸ್ ಕಪ್ ಟೂರ್ನಿಯ ಪಂದ್ಯದಲ್ಲಿ ಜೊಹೊರ್ ಟೈಗರ್ಸ್ ವಿರುದಟಛಿ ಅಂತಿಮ ಕ್ಷಣದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಆಸರೆಯಾಗಿದ್ದ ಯುಗೆನ್ಸನ್ ಲಿಂಗ್ಡೊ, ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಕಲ್ಯಾಣಿ ಭಾರತ್ ಎಫ್ ಸಿ ವಿರುದ್ಧ ಗೆದ್ದು ತವರಿನ ಅಂಗಣದಲ್ಲಿ ಮೊದಲ  ಗೆಲವಿನ ಸಿಹಿ ಸವಿದಿತ್ತು.

ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಜಯ, 2ರಲ್ಲಿ ಸೋಲು, 1ರಲ್ಲಿ ಡ್ರಾ ಫಲಿತಾಂಶದೊಂದಿಗೆ 7 ಅಂಕ ಸಂಪಾದಿಸಿದ್ದು, ಅಂಕ ಪಟ್ಟಿಯಲ್ಲಿ 6 ಸ್ಥಾನ ಪಡೆದಿದೆ. ಶಿಲ್ಲಾಂಗ್ ಲೊಜೊಂಗ್ ತಂಡವೂ ಸಹ ಆಡಿರುವ 4 ಪಂದ್ಯಗಳಿಂದ 4 ಅಂಕ ಸಂಪಾದಿಸಿ 8ನೇ ಸ್ಥಾನದಲ್ಲಿದೆ. ಕಳೆದ ಎರಡೂ ಪಂದ್ಯದಲ್ಲಿ ಸೋತಿರುವ ಶಿಲ್ಲಾಂಗ್ ತಂಡದ ಆತ್ಮ ವಿಶ್ವಾಸ ಕುಗ್ಗಿದೆ. ಅಲ್ಲದೆ ಆಟಗಾರರು ಒತ್ತಡದಲ್ಲಿ  ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದಲ್ಲೂ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಗೆಲವಿನ ಫೇವರಿಟ್ ಆಗಿದ್ದರೂ ಶಿಲ್ಲಾಂಗ್ ಲಾಜೊಂಗ್ ತಂಡ ಯಾವುದೇ ಹಂತದಲ್ಲಿ ಶಾಕ್ ನೀಡಿದರೂ ಅಚ್ಚರಿ ಇಲ್ಲ. ಹಾಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com