ಸಲ್ಲು ಮಾದರಿಯಲ್ಲಿ ಮೆಗ್ರಾತ್?

ವನ್ಯಜೀವಿಗಳನ್ನು ಬೇಟೆಯಾಡಿ ಸೆಲೆಬ್ರಿಟಿಗಳು ವಿವಾದದಲ್ಲಿ ಸಿಲುಕುವುದು ನಿಮಗೆ ಗೊತ್ತೇ ಇದೆ..
ಮಾಜಿ ಕ್ರಿಕೆಟಿಗ ಗ್ಲೆನ್ ಮೆಗ್ರಾತ್ (ಸಂಗ್ರಹ ಚಿತ್ರ)
ಮಾಜಿ ಕ್ರಿಕೆಟಿಗ ಗ್ಲೆನ್ ಮೆಗ್ರಾತ್ (ಸಂಗ್ರಹ ಚಿತ್ರ)

ವನ್ಯಜೀವಿಗಳನ್ನು ಬೇಟೆಯಾಡಿ ಸೆಲೆಬ್ರಿಟಿಗಳು ವಿವಾದದಲ್ಲಿ ಸಿಲುಕುವುದು ನಿಮಗೆ ಗೊತ್ತೇ ಇದೆ.

ಕ್ಷಮಿಸಿ ನಾವು ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಅಥವಾ ಸೈಫ್ ಅಲಿ ಖಾನ್ ಬಗ್ಗೆ ಮಾತಾಡುತ್ತಿಲ್ಲ. ನಾವು ಹೇಳಹೊರಟಿರುವುದು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಗ್ರಾತ್ ವಿಚಾರವಾಗಿ. ಅವರೀಗ ಜಿಂಬಾಬ್ವೆಯ ಕಾಡುಗಳಲ್ಲಿನ ವನ್ಯಜೀವಿಗಳನ್ನು ಬೇಟೆಯಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಮೃತ ಆನೆಯ ಕಳೇಬರದ ಮುಂದೆ ಮೆಗ್ರಾತ್ ಅವರು ರೈಫಲ್ ಹಿಡಿದು ಕುಳಿತಿರುವ ಚಿತ್ರವೊಂದು ಆಸೀಸ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೆಗ್ರಾತ್, ತಾವು 2008ರಲ್ಲಿ ಜಿಂಬಾಬ್ವೆಯ ಕಾಡುಗಳಲ್ಲಿ ಕಾನೂನು ಬದ್ಧವಾಗಿ ವನ್ಯಜೀವಿ ಬೇಟೆಯಾಡಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ. ಆದರೂ ಟೀಕೆಗಳಿಂದ ಅವರು ಮುಕ್ತರಾಗಿಲ್ಲ. ಅಲ್ಲಿನ ಬುದ್ಧಿ ಜೀವಿಗಳು ಅವರ ನಡೆಯನ್ನು ಖಂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com