ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು

ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 130 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು

ಮೆಲ್ಬರ್ನ್: ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 130 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

1992, 1999 ಮತ್ತು 2011ರಲ್ಲಿ ಈ ಮೂರು ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದ್ದ ಭಾರತಕ್ಕೆ ಸೋಲೇ ಗತಿಯಾಗಿತ್ತು. ಆದರೆ, ಈ ಬಾರಿ ಭಾರತ ವಿಶ್ವಕಪ್‌ನಲ್ಲಿ ಇತಿಹಾಸ ಬದಲಿಸುವ ಮೂಲಕ ಹರಿಣಗಳ ಗೆಲವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ, ಆರಂಭಿಕ ಆಟಗಾರ ಶಿಖರ್ ಧವನ್ (132 ರನ್) ಮತ್ತು ಅಜಿಂಕ್ಯ ರಹಾನೆ (79 ರನ್ )ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 307 ರನ್ ಗಳಿಸುವ ಮೂಲಕ
ದ.ಆಫ್ರಿಕಾಗೆ 308 ರನ್ ಗಳ ಟಾರ್ಗೆಟ್ ನೀಡಿತು.

ಭಾರತದ ಬೃಹತ್ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ,
40.2 ಓವರ್‌ಗಳಲ್ಲಿ ಕೇವಲು 177ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು.

ಉತ್ತಮ ಬ್ಯಾಟ್ಸ್‌ಮನ್‌ಗಳ ಪಡೆಯನ್ನೇ ಹೊಂದಿದ್ದ
ದಕ್ಷಿಣ ಆಫ್ರಿಕಾ ತಂಡ ಭಾರತದ ಬೌಲಿಂಗ್‌ ದಾಳಿಗೆ ಮಂಕಾಯಿತು. ಆರಂಭಿಕ ಆಟಗಾರರಾದ ಹಾಶಿಮ್‌ ಆಮ್ಲಾ 22 ಮತ್ತು ಡಿ ಕಾಕ್‌ 7 ರ ನ್‌ಗಳಿಸಿ ಔಟಾದರು.

ಇನ್ನು 55ರನ್ ಗಳಿಸಿ ಡು ಪ್ಲೆಸಿಸ್ ಔಟಾದರೆ, ಡ್ಯುಮಿನಿ 6 ರನ್‌ ಗೆ ಪೆವಿಲಿಯನ್‌ ಸೇರಿದರು. ವಿಲಿಯರ್ 30 ರನ್‌ ಗಳಿಸಿ ಔಟಾದರು.  ಡೇವಿಡ್‌ ಮಿಲ್ಲರ್‌ 23 ರನ್‌ಗಳಿಸಿ ರನೌಟಾದರು.

ಭಾರತದ ಪರ ಅಶ್ವಿ‌ನ್‌ 3 , ಮೊಹಿತ್‌ ಶರ್ಮಾ ಮತ್ತು  ಶಮಿ ತಲಾ 2,ಜಡೇಜಾ 1 ವಿಕೆಟ್‌ ಪಡೆದರು.

ಭಾರತದ ಮೊತ್ತ 9 ರನ್‌ಗಳಾಗಿದ್ದ ವೇಳೆ ರೋಹಿತ್‌ ಶರ್ಮಾ ಅವರು ರನ್‌ ಔಟ್‌ಗೆ ಬಲಿಯಾಗುವ ಮೂಲಕ ತಂಡ ಆರಂಭಿಕ ಆಘಾತ ಎದುರಿಸುವಂತಾಯಿತು. ಆದರೆ ಆ ಬಳಿಕ ಜೊತೆಗೂಡಿದ ಶಿಖರ್‌ ಧವನ್‌ ಮತ್ತು ವಿರಾಟ್ ಕೊಹ್ಲಿ ಜೋಡಿ ತಾಳ್ಮೆಯ ಆಟವಾಡಿ ಭಾರತವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಮೋಘ ಶತಕದ ಜೊತೆಯಾಟ ಆಡಿದ ಈ ಜೋಡಿಯನ್ನು ದ.ಆಫ್ರಿಕಾದ ಇಮ್ರಾನ್ ತಾಹಿರ್ ಅವರು ಬೇರ್ಪಡಿಸಿದರು.

46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಕೊಹ್ಲಿ ಡುಪ್ಲಿಸಿಸ್ ಅವರಿಗೆ ಕ್ಯಾಚ್ ನೀಡಿ ಹೊರ  ನಡೆದರು.ಬಳಿಕ ಕ್ರೀಸ್ ಗೆ ಆಗಮಿಸಿದ ರಹಾನೆ-ಶಿಖರ್ ಧವನ್ ಜೊತೆಗೂಡ ತಂಡದ ಮೊತ್ತವನ್ನು ಹಿಗ್ಗಿಸಿದರು. ದಕ್ಷಿಣ ಆಫ್ರಿಕಾದ ಬೌಲರ್ ಗಳನ್ನು ನಿರ್ಧಾಕ್ಷೀಣ್ಯವಾಗಿ ದಂಡಿಸಿದ ಈ ಜೋಡಿ ಶತಕದ ಜೊತೆಯಾಟ ನೀಡಿತು. ಅಂತಿಮವಾಗಿ ಪಂದ್ಯದ 44ನೇ ಓವರ್ ನಲ್ಲಿ ಶತಕ ಸಿಡಿಸಿ ಆಟವಾಡುತ್ತಿದ್ದ ಶಿಖರ್ ಧವನ್ ಪಾರ್ನೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಬಳಿಕ ಬಂದ ಯಾವುದೇ ಆಟಗಾರರೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಟವಾಡಲಿಲ್ಲ. ಇನ್ನಿಂಗ್ಸ್ ಅಂತಿಮ ಓವರ್ ಗಳಾದ್ದರಿಂದ ಎಲ್ಲರೂ ಹೊಡಿಬಡಿ ಆಟಕ್ಕೆ ಮುಂದಾದರು. ಇದರಿಂದಾಗಿ ಭಾರತದ ಕೊನೆಯ ಕ್ರಮಾಂಕದ ಆಟಗಾರರು ಬೇಗ ಬೇಗನೇ ಪೆವಿಲಿಯನ್ ಸೇರಬೇಕಾಯಿತು. ಧೋನಿ (18 ರನ್), ಸುರೇಶ್ ರೈನಾ (6 ರನ್), ರವೀಂದ್ರ ಜಡೇಜಾ (2 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲೇ 79 ರನ್ ಗಳಿಸಿದ್ದ ರಹಾನೆ ಕೂಡ ಸ್ಟೇಯ್ನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಅಂತಿಮವಾಗಿ ಭಾರತದ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 307 ರನ್ ಕಲೆಹಾಕಿತು.ದಕ್ಷಿಣ ಆಫ್ರಿಕಾ ತಂಡದ ಪರ ಸ್ಟೇಯ್ನ್ 2 ವಿಕೆಟ್, ಮಾರ್ಕೆಲ್, ಇಮ್ರಾನ್ ತಾಹಿರ್ ಮತ್ತು ಪಾರ್ನೆಲ್ ತಲಾ ಒಂದು ವಿಕೆಟ್ ಕಬಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com