
ನವದೆಹಲಿ: ಮೈಕ್ರೋಬ್ಲಾಗಿಂಗ್ ಸೈಟ್ ಟ್ವೀಟರ್‌ನಲ್ಲಿ ವಿರಾಟ್ ಕೊಹ್ಲಿ ಫಾಲೋವರ್‌ಗಳ ಸಂಖ್ಯೆ 5 ಮಿಲಿಯನ್ ತಲುಪಿದೆ.
ಅತೀ ಕಡಿಮೆ ಅವಧಿಯಲ್ಲಿ ಕೊಹ್ಲಿ ಇಷ್ಟೊಂದು ಫಾಲೋವರ್‌ಗಳನ್ನು ಹೊಂದುವ ಮೂಲಕ ಈ ದಾಖಲೆ ಸೃಷ್ಟಿಸಿದ್ದಾರೆ. ಹೊಸವರ್ಷದ ಆರಂಭದಲ್ಲೇ ಈ ರೀತಿಯ 'ಸಾಧನೆ' ಮಾಡಲು ಸಾಧ್ಯವಾಗಿಸಿದ್ದಕ್ಕೆ ಕೊಹ್ಲಿ ಟ್ವೀಟರ್‌ನಲ್ಲಿ ತನ್ನ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಟ್ವೀಟರ್‌ನಲ್ಲಿ ಕ್ರೀಡಾಪಟುಗಳಿಗಿರುವ ಫಾಲೋವರ್‌ಗಳ ಸಂಖ್ಯೆಯಲ್ಲಿ ಇದೀಗ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಡಿಸೆಂಬರ್ 3 ಕ್ಕೆ ಸಚಿನ್ ತೆಂಡೂಲ್ಕರ್ ಅವರ ಟ್ವೀಟರ್ ಫಾಲೋವರ್‌ಗಳ ಸಂಖ್ಯೆಯನ್ನು ಹಿಂದಿಕ್ಕಿ ಕೊಹ್ಲಿ ಮುನ್ನಡೆ ಸಾಧಿಸಿದ್ದರು. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಸಚಿನ್ ಈಗ ಫಾಲೋವರ್‌ಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಅಕ್ಟೋಬರ್ ನಲ್ಲಿ ಕೊಹ್ಲಿ ಫಾಲೋವರ್‌ಗಳ ಸಂಖ್ಯೆ 4 ಮಿಲಿಯನ್ ದಾಟಿದ್ದು, ಇದು ದಿನದಿಂದ ದಿನಕ್ಕೆ ಕೊಹ್ಲಿ ಜನಪ್ರಿಯರಾಗುತ್ತಿರುವುದನ್ನು ಸೂಚಿಸುತ್ತಿದೆ.
ಸದ್ಯ ಭಾರತ- ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬ್ಯುಸಿಯಾಗಿದ್ದಾರೆ. ಟೆಸ್ಟ್ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿರುವುದರಿಂದ ಟೀಂ ಇಂಡಿಯಾದ ನಾಯಕತ್ವವನ್ನು ಕೊಹ್ಲಿ ವಹಿಸಿದ್ದಾರೆ. ಜನವರಿ 6 ರಿಂದು ನಡೆಯುವ ಫೈನಲ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಟೀಂ ಇಂಡಿಯಾದ ಸಾರಥ್ಯ ವಹಿಸಲಿದ್ದಾರೆ.
Advertisement