
ಸಿಡ್ನಿ: ಭವಿಷ್ಯದಲ್ಲಿ ಭಾರತ ತಂಡದ ಕೋಚ್ ಸ್ಥಾನಕ್ಕೆ ಆಸ್ಚ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಸರಿಯಾದ ವ್ಯಕ್ತಿ ಎಂದು ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಸಲಹೆ ನೀಡಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಆಸಿಸ್ ಆಟಗಾರ ಸದ್ಯಕ್ಕೆ ಟೀಂ ಇಂಡಿಯಾದ ಗುರು ಸ್ಥಾನವನ್ನು ಅಲಂಕರಿಸಲು ಸಿದ್ಧವಿಲ್ಲ ಎಂದಿದ್ದಾರೆ.
ಶುಕ್ರವಾರ ಈ ಕುರಿತು ಆಸಿಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಸ್ಸಿ, ಆ ಮಹತ್ವದ ಸವಾಲಿಗೆ ನಾನು ಸಿದ್ಧನಿದ್ದೇನೆ ಎಂಬುದರ ಬಗ್ಗೆ ವಿಶ್ವಾಸವಿಲ್ಲ ಎಂದು ತಿಳಿಸಿದ್ದಾರೆ. ಧೋನಿ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ನನ್ನ ಹೆಸರು ಸೂಚಿಸಿದ್ದರೆ ಅವರಿಗೆ ಧನ್ಯವಾದಗಳು. ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೇನೆ ಹಾಗಾಗಿ ಈ ಜವಾಬ್ದಾರಿ ನಿರ್ವಹಿಸಲು ಸಾಧ್ಯವೆ ಎಂಬುದು ಗೊತ್ತಿಲ್ಲ ಎಂದರು.
Advertisement