
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಕುವರ ಕೆ.ಎಲ್ ರಾಹುಲ್ ಭರ್ಜರಿ ಶತಕ ದಾಖಲಿಸಿದ್ದಾರೆ. ರಾಹುಲ್ ತಮ್ಮ ವೃತ್ತಿ ಬದುಕಿನಲ್ಲಿ ಎರಡನೇ ಶತಕ ದಾಖಲಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 572 ರನ್ಗೆ ಡಿಕ್ಲೇರ್ ಮಾಡಿಕೊಂಡಿತು. ನಂತರ ಭಾರತ ಮೊದಲ ಇನಿಂಗ್ಸ್ ಪ್ರಾರಂಭಿಸಿತ್ತು. ಭರವಸೆ ಆಟಗಾರ ಮುರಳಿ ವಿಜಯ್ ಮೊದಲ ಓವರ್ನಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು.
ಎರಡನೇ ದಿನದಾಟದಂತ್ಯಕ್ಕೆ ಭಾರತ ಪರ ಲೋಕೇಶ್ ರಾಹುಲ್ ಅಜೇಯ 31 ಮತ್ತು ರೋಹಿತ್ ಶರ್ಮಾ ಅಜೇಯ 40 ಗಳಿಸಿ ಮೂರನೇ ದಿನದಾಟ ಕಾಯ್ದಿರಿಸಿದ್ದರು.
ಎರಡನೇ ದಿನದ ಮೊತ್ತ 1 ವಿಕೆಟ್ಗೆ 71 ರನ್ಗಳೊಂದಿಗೆ ಮೂರನೇ ದಿನದಾಟ ಮುಂದುವರಿಸಿದ ಭಾರತಕ್ಕೆ ಕೆ.ಎಲ್ ರಾಹುಲ್ರ ಶತಕದ ಆಸರೆ ದೊರೆಯಿತು. ರಾಹುಲ್ ಸಿಡ್ನಿಯಲ್ಲಿ ತಮ್ಮ ಮೊದಲ ಶತಕ ಸಿಡಿಸಿದ್ದು, 110 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ಕಾಟನ್ ಬೋಲ್ಡಾದರು.
ರೋಹಿತ್ ಶರ್ಮಾ 53 ರನ್ ಗಳಿಸಿ ನಾಥನ್ ಲಿಯೊನ್ಗೆ ಬೋಲ್ಡಾಡರು. ಅಜಿಂಕ್ಯಾ ರಹಾನೆ ಕೇವಲ 13 ರನ್ ಗಳಿಸಿದ್ದಾಗ ವಾಟ್ಸನ್ರ ಎಲ್ಬಿ ಬಲೆಗೆ ಬಿದ್ದರು. ಬಿರುಸಿನ ಆಟಗಾರ ಸುರೇಶ್ ರೈನಾ ಶೂನ್ಯಕ್ಕೆ ನಿರ್ಗಮಿಸಿದರು. ಅಲ್ಪಮೊತ್ತಕ್ಕೆ ಕ್ಷೀಣಿಸುತ್ತಿದ್ದ ಭಾರತಕ್ಕೆ ಆರಸೆಯಾಗಿದ್ದು ನಾಯಕ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿರುವ ಕೊಹ್ಲಿ ಅಜೇಯ 111 ರನ್ ಗಳಿಸಿ ಬ್ಯಾಟ್ ಬೀಸುತ್ತಿದ್ದಾರೆ. ಕೊಹ್ಲಿಗೆ ವೃದ್ಧಿಮಾನ್ ಸಹಾ ಸಾಥ್ ನೀಡಿದ್ದಾರೆ. ಭಾರತ ೫ ವಿಕೆಟ್ಗೆ ೩೦೨ ರನ್ ಗಳಿಸಿದೆ.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಹಾಗೂ ಶೇನ್ ವಾಟ್ಸನ್ ತಲಾ ಎರಡು ವಿಕೆಟ್ ಪಡೆದರೆ, ನಾಥನ್ ಲಿಯೊನ್ 1 ವಿಕೆಟ್ ಪಡೆದಿದ್ದಾರೆ.
Advertisement