ಟೆಸ್ಟ್ ರ್ಯಾಂಕಿಂಗ್: ಕೊಹ್ಲಿ 3 ಸ್ಥಾನ ಏರಿಕೆ

ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ವಿರಾಟ್ ಕೊಹ್ಲಿ ಮೂರು ಸ್ಥಾನ ಮೇಲೇರಿದ್ದಾರೆ. ಆ ಮೂಲಕ ಅವರು 12ನೇ ಕ್ರಮಾಂಕ ಪಡೆದಿದ್ದಾರೆ.

ಇನ್ನು ಶ್ರೀಲಂಕಾದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ, ನಂಬರ್ ಒನ್ ಸ್ಥಾನಕ್ಕೆ ಮರಳಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಗೊಹ್ಲಿ, ಕ್ರಮವಾಗಿ 147 ಮತ್ತು 46 ರನ್‌ಗಳಿಸಿ ಪಂದ್ಯ ಡ್ರಾಗೊಳ್ಳಲು ನೆರವಾಗಿದ್ದರು. ಹಾಗಾಗಿ, ಸರಣಿಯಲ್ಲಿನ ಅವರ ಉತ್ತಮ ಪ್ರದರ್ಶನಕ್ಕಾಗಿ ರ್ಯಾಂಕಿಂಗ್‌ನಲ್ಲಿ ಮೇಲುಗೈ ದೊರತಿದೆ.

ಭಾರತದ ಇತರೆ ಬ್ಯಾಟ್ಸ್‌ಮನ್‌ಗಳ ಪೈಕಿ ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಕ್ರಮವಾಗಿ 22ನೇ ಮತ್ತು 23ನೇ ಸ್ಥಾನ ಪಡೆದಿರುವುದೇ ಉತ್ತಮ ಸಾಧನೆಯಾಗಿದೆ. ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಸಿಡಿಸಿದ್ದ ಶ್ರೀಲಂಕಾದ ಕುಮಾರ ಸಂಗಕ್ಕಾರ (203 ರನ್), ಅಗ್ರಸ್ಥಾನಕ್ಕೇರಿದ್ದು, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.  ಆದರೆ, ಈ ಇಬ್ಬರು ಆಟಗಾರರ ನಡುವಿನ ಅಂತರ ಕೇವಲ 1 ಅಂಕ ಇರುತ್ತದೆ. ಸಂಗಕ್ಕಾರ 909 ಅಂಕ ಪಡೆದಿದ್ದರೆ, ಡಿವಿಲಿಯರ್ಸ್ 908 ಅಂಕಗಳಲ್ಲಿದ್ದಾರೆ.

ಉಳಿದಂತೆ, ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ 3ನೇ, ಆಸ್ಟ್ರೇಲಿಯಾದ ಸ್ವೀಟನ್ ಸ್ಮಿತ್ 4ನೇ ಮತ್ತು ಶ್ರೀಲಂಕಾದ ಆ್ಯಂಜೆಲೋ ಮ್ಯಾಥ್ಯೂಸ್ 5ನೇ ಸ್ಥಾನಗಳ ಗೌರವ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇಯ್ನ್ ಅಗ್ರಗಣ್ಯರಾಗಿದ್ದರೆ, ಆಸ್ಟ್ರೇಲಿಯಾದ ರಯಾನ್ ಹ್ಯಾರಿಸ್ ಎರಡನೇ ಕ್ರಮಾಂಕದಲ್ಲಿದ್ದಾರೆ. ಶ್ರೀಲಂಕಾದ ರಂಗಣ ಹ್ಯಾರಿಸ್ ಎರಡನೇ ಕ್ರಮಾಂಕದಲ್ಲಿದ್ದಾರೆ. ಶ್ರೀಲಂಕಾದ ರಂಗಣ ಹೆರಾತ್ 3ನೇ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 4ನೇ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ 5ನೇ ಕ್ರಮಾಂಕದಲ್ಲಿದ್ದಾರೆ.

ಆದರೆ, ಭಾರತದ ಪರ ಯಾವೊಬ್ಬ ಬೌಲರ್ ಅಗ್ರ ಹತ್ತರೊಳಗೆ ಸ್ಥಾನ ಹೊಂದಿಲ್ಲ.

7ನೇ ಸ್ಥಾನಕ್ಕೆ ಭಾರತ ಕುಸಿತ
ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-2ರಿಂದ ಸೋಲನುಭವಿಸಿದ ಭಾರತ ಈ ಹಿನ್ನಡೆ ಅನುಭವಿಸಿದೆ. ಶ್ರೀಲಂಕಾ ಕೇವಲ 1 ಅಂಕದ ಅಂತರದಲ್ಲಿ ಭಾರತವನ್ನು ಕೆಳಗಿಳಿಸಿ 6ನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ನಂಬರ್ ಒನ್ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com