ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಬ್ರೆಟ್ ಲೀ (ಸಂಗ್ರಹ ಚಿತ್ರ)
ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಬ್ರೆಟ್ ಲೀ (ಸಂಗ್ರಹ ಚಿತ್ರ)

ಕ್ರಿಕೆಟ್ ಲೋಕಕ್ಕೆ ಬ್ರೆಟ್ ಲೀ ವಿದಾಯ

ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಬ್ರೆಟ್ ಲೀ ಗುರುವಾರ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ್ದಾರೆ.

ಸಿಡ್ನಿ: ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಬ್ರೆಟ್ ಲೀ ಗುರುವಾರ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ್ದಾರೆ.

ಸುಮಾರು 20 ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿದ್ದ ಬ್ರೆಟ್ ಲೀ ಅವರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ರೆಟ್ ಲೀ, ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸಿದರು. 38 ವರ್ಷ ವಯಸ್ಸಿನ ಲೀ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿದ್ದು, ಬ್ರೆಟ್ ಲೀ ಅವರು 221 ಪಂದ್ಯಗಳಲ್ಲಿ 380 ವಿಕೆಟ್ ಕಬಳಿಸಿ ಗ್ಲೆನ್ ಮೆಗ್ರಾಥ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಲ್ಲದೆ 76 ಟೆಸ್ಟ್ ಪಂದ್ಯಗಳಿಂದ 310 ವಿಕೆಟ್ ಪಡೆದಿದ್ದಾರೆ.

ಬ್ರೆಟ್ ಲೀ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಆಗಿದ್ದು, ವಿಶ್ವದ ವೇಗದ ಬೌಲರ್ ಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಿರುವ ಬ್ರೆಟ್ ಲೀ, ಗಂಟೆಗೆ 160 ಕಿಮೀ ವೇಗದಲ್ಲಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ರೆಟ್ ಲೀ ಭಾರತ ವಿರುದ್ಧ 1999ರ ಡಿಸೆಂಬರ್ 26ರಂದು ಮೆಲ್ಬೋರ್ನ್ ನಡೆದ ಅವರ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. 2000ದ ಜನವರಿ 9ರಂದು ಪಾಕಿಸ್ತಾನ ವಿರುದ್ಧ ಬ್ರಿಸ್ಬೇನ್ ನಲ್ಲಿ ನಡೆದ ಪಂದ್ಯದ ಮೂಲಕ ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು.

Related Stories

No stories found.

Advertisement

X
Kannada Prabha
www.kannadaprabha.com