
ಬ್ರಿಸ್ಪೇನ್: ಆಸ್ಟ್ರೇಲಿಯಾದ ಬ್ರಿಸ್ಪೇನ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 153 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದಾರೆ.
ಭಾರತ-ಇಂಗ್ಲೆಂಡ್ ನಡುವೆ ಸರಣಿಯ 3ನೇ ಪಂದ್ಯದ ಟಾಸ್ ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ಪರ ಬ್ಯಾಟಿಂಗ್ ಮಾಡಿದ ಆಟಗಾರರು ಪೆವಿಲಿಯನ್ ಪೆರೆಡ್ ನಡೆಸಿದರು. ಇದರೊಂದಿಗೆ ಭಾರತ 39 ಓವರ್‌ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 153 ರನ್ ಗಳಿಸಿದೆ.
ಆರಂಭಿಕರಾಗಿ ಬಂದ ಶಿಖರ್ ಧವನ್ ಮತ್ತೆ ಕಳಪೆ ಪ್ರದರ್ಶನ ನೀಡಿದ್ದಾರೆ. ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಅಜಿಂಕ್ಯಾ ರಹಾನೆ ತಾಳ್ಮೆಯ ಆಟವಾಡಿ 33 ರನ್ ಗಳಿಸಲಷ್ಟೇ ಶಕ್ತರಾದರು. ನಂತರ ಬಂದ ಅಂಬಟಿ ರಾಯುಡು 23 ರನ್ ಗಳಿಸಿದರೆ, ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಕೇವಲ 4 ರನ್‌ಗೆ ಔಟಾದರು.
ಅಕ್ಷರ್ ಪಟೇಲ್ 0, ಸ್ಟುವರ್ಟ್ ಬಿನ್ನಿ 44, ಸುರೇಶ್ ರೈನಾ 1, ನಾಯಕ ಧೋನಿ 34, ಭುವನೇಶ್ವರ್ ಕುಮಾರ್ 5, ಮಹಮ್ಮದ್ ಶಮಿ 1 ರನ್‌ಗೆ ಔಟಾದರು.
ಆಸ್ಟ್ರೇಲಿಯಾ ಪರ ಸ್ಟೀವನ್ ಫಿನ್ 5, ಜೇಮ್ಸ್ ಆ್ಯಂಡರ್ಸನ್ 4, ಮೋಹಿನ್ ಅಲಿಗೆ 1 ವಿಕೆಟ್ ಪಡೆದಿದ್ದಾರೆ.
Advertisement