ರಾಷ್ಟ್ರೀಯ ಕ್ರೀಡೆಗೆ ಕೇರಳ ಸಜ್ಜು

ದೇವರ ನಾಡು ಎಂಬ ಅನ್ವರ್ಥನಾಮದಿಂದ ಖ್ಯಾತಿಗಳಿಸಿರುವ ಕೇರಳದಲ್ಲಿ ಶನಿವಾರದಿಂದ ಕ್ರೀಡಾಕಲರವ...
35ನೇ ರಾಷ್ಟ್ರೀಯ ಗೇಮ್ಸ್
35ನೇ ರಾಷ್ಟ್ರೀಯ ಗೇಮ್ಸ್

ತಿರುವನಂತಪುರ: ದೇವರ ನಾಡು ಎಂಬ ಅನ್ವರ್ಥನಾಮದಿಂದ ಖ್ಯಾತಿಗಳಿಸಿರುವ ಕೇರಳದಲ್ಲಿ ಶನಿವಾರದಿಂದ ಕ್ರೀಡಾಕಲರವ ಆರಂಭಗೊಳ್ಳಲಿದೆ. ಹದಿನೈದು ದಿನಗಳ ಕಾಲ ನಡೆಯಲಿರುವ 35ನೇ ರಾಷ್ಟ್ರೀಯ ಗೇಮ್ಸ್ ಗೆ ಕೇರಳ ಸನ್ನದ್ಧವಾಗಿದೆ.

ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಕ್ರೀಡಾಪ್ರತಿಭೆಗಳು ಇಲ್ಲಿ ತಮ್ಮ ಸಾಮರ್ಥ್ಯ ತೋರಲು ತುದಿಗಾಲಲ್ಲಿ ನಿಂತಿದ್ದಾರೆ. ತಿರುವನಂತಪುರದ ಹೊರವಲಯದಲ್ಲಿ ಕ್ರೀಡಾಕೂಟಕ್ಕಾಗಿ ತಲೆಎತ್ತಿರುವ ಹೊಸ ಕ್ರೀಡಾಂಗಣ ಕ್ರೀಡಾಳುಗಳನ್ನು ಸ್ವಾಗತಿಸುತ್ತಿದೆ. ಸುಮಾರು 40 ಸಾವಿರ ಪ್ರೇಕ್ಷರನ್ನು ಹಿಡಿದಿಡಬಲ್ಲ ಈ ಕ್ರೀಡಾಂಗಣ ಹೊಸ ಮಾದರಿಯದ್ದಾಗಿವೆ. ಸುಸಜ್ಜಿತ ಕ್ರೀಡಾಂಗಣದಲ್ಲಿ ಮುಂದಿನ ಎರಡು ವಾರ ಹೊಸ ದಾಖಲೆಗಳು ಮೇಳೈಸಲಿವೆ. ಹೊಸ ಪ್ರತಿಭೆಗಳು ಅರಳಲಿವೆ.

ಪಂದ್ಯಾವಳಿ ರೂಪು-ರೇಷೆ
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ಕೇವಲ ಒಂದು ಸ್ಥಳದಲ್ಲಿ ನಡೆಯದೆ, ವಿವಿಧ ಸ್ಥಳಗಳಲ್ಲಿ ಆಯೋಜಿಸಲ್ಪಟ್ಟಿದೆ. ತಿರುವನಂತಪುರ ಸೇರಿದಂತೆ ಕೇರಳದ 7 ಜಿಲ್ಲೆಗಳ 30 ವಿವಿಧ ಸ್ಥಳಗಳಲ್ಲಿ ವಿವಿಧ ವಿಭಾಗಗಳಲ್ಲಿನ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ, ಕ್ರೀಡಾಕೂಟಕ್ಕಾಗಿ ನಿರ್ಮಿಸಲಾಗಿರುವ ಕ್ರೀಡಾ ಗ್ರಾಮದಲ್ಲೂ ಸ್ಪರ್ಧೆಗಳು ನಡೆಯಲಿವೆ.

ಸಚಿನ್ ಮುಖ್ಯ ಅತಿಥಿ
ಶನಿವಾರ ಸಂಜೆ ಭವ್ಯ ಉದ್ಘಾಟನೆ ಸಮಾರಂಭ ನಡೆಯಲಿದೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com