
ವಿಂಬಲ್ಡನ್: ಆಕರ್ಷಕ ಪ್ರದರ್ಶನ ನೀಡಿದ ಭಾರತದ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ ಪಡೆದಿದ್ದಾರೆ.
ವಿಂಬಲ್ಡನ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸ್ವಿಸ್ ಆಟಗಾರ್ತಿಯು ಮಾರ್ಟಿನಾ ಹಿಂಗಿಸ್ ಅವರ ಜತೆಗೂಡಿ ಆಡಿದ ಆಟದಲ್ಲಿ ಹಿಂಗಿಸ್ ಕೇವಲ 48 ನಿಮಿಷಗಳಲ್ಲಿ ಗೆಲವು ಪಡೆದರು.
ಇದರಂತೆ ಇಂದು ನಡೆದ ಹೋರಾಟದಲ್ಲಿ ಇಂಡೋ-ಸ್ವಿಸ್ ಜೋಡಿ 6-2, 6-2ರ ನೇರ ಸೆಟ್ ಗಳಲ್ಲಿ ಅರ್ಟೆಮ್ ಸಿತಾಕ್ ಮತ್ತು ಅನಸ್ತೇಸಿಯಾ ರೊಡಿನೋವಾ ಅವರನ್ನು ಸೋಲಿಸಿದರು.
ವಿವಿಧ ಗ್ರ್ಯಾನ್ ಸ್ಲ್ಯಾಮ್ ಗಳನ್ನು ಗೆದ್ದಿರುವ ಈ ಜೋಡಿ, ಈ ಪಂದ್ಯದಲ್ಲಿ ಒಂದು ಬ್ರೇಕ್ ಪಾಯಿಂಟ್ ಎದುರಿಸಲಿಲ್ಲ. ಎದುರಾಳಿ ತಂಡವನ್ನು ಪ್ರತಿ ಸೆಟ್ ನಲ್ಲಿಯೂ ಎರಡು ಬಾರಿ ಎದುರಿಸಿದರು.
Advertisement