
ನವದೆಹಲಿ : ವಿಶ್ವದ ಶ್ರೀಮಂತ ಕ್ರೀಡಾ ಮಂಡಳಿ ಎನಿಸಿರುವ ಭಾರತೀಯ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಅಪ್ರಿಯ ಸಂಗತಿಯೊಂದು ಬಂದೆರಗಿದೆ. ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು 2011ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಕೊಚ್ಚಿ ಟಸ್ಕರ್ಸ್ ಕೇರಳ ಪ್ರಾಂಚೈಸಿಯನ್ನು ವಜಾಗೊಳಿಸಿದ್ದ ಬಿಸಿಸಿಐ ಗೆ ಇದೀಗ 550 ಕೋಟಿ ರೂಗಳನ್ನು ನೀಡಬೇಕೆಂದು ಭಾರತದ ನಿವೃತ್ತ ನ್ಯಾಯ
ಮೂರ್ತಿ ಲಹೋಟಿ ನೇತೃತ್ವದ ಸಮಿತಿ ವರದಿ ನೀಡಿದೆ. 550 ಕೋಟಿ ನೀಡದಿದ್ದ ಪಕ್ಷದಲ್ಲಿ ವಾರ್ಷಿಕ ಶೇ.18 ರಷ್ಟು ಮೊತ್ತದ ದಂಡ ತೆರಬೇಕು ಎಂದೂ ವರದಿಯಲ್ಲಿ ಹೇಳಲಾಗಿದೆ. ಇದು ಬಿಸಿಸಿಐಗೆ ನುಂಗಲಾಗದ ಬಿಸಿತುಪ್ಪವಾಗಿ ಪರಿಣಮಿಸಿದೆ.
ಐಪಿಎಲ್ ಕೂಟದಲ್ಲಿ ಒಂದಾಗುವ ಸಲುವಾಗಿ ಕೊಚ್ಚಿ ಟಸ್ಕರ್ಸ್ ಕೇರಳ ಪ್ರಾಚೈಸಿಯು ರೆಂಡೆವಸ್ ಸ್ಪೋಟ್ಸ್ ವಲ್ರ್ಡ್(ಆರ್‍ಎಸ್‍ಡಬ್ಲ್ಯೂ) ಕಂಪೆನಿ ಸೇರಿದಂತೆ ಒಟ್ಟಾರೆ ಐದು ಕಂಪನಿಗಳ ಸಮೂಹದಿಂದ ಹಣಕಾಸು ನೆರವು ಪಡೆದಿತ್ತು. ಆದರೆ ಈ ಸಮೂಹದ ಬ್ಯಾಂಕ್ ಗ್ಯಾರಂಟಿಯು ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದಿದ್ದ ಬಿಸಿಸಿಐ 6 ತಿಂಗಳೊಳಗೆ ಹೊಸ ಬ್ಯಾಂಕ್ ಗ್ಯಾರಂಟಿಯನ್ನು ಒದಗಿಸುವಂತೆ ಕೆಟಿಕೆಗೆ ಸೂಚಿಸಿತ್ತು. ಆದರೆ ನಿಗದಿತ ಸಮಯದಲ್ಲಿ ಕೆಟಿಕೆ ಇದನ್ನು ಪೂರೈಸಲು ವಿಫಲವಾಗಿದ್ದರಿಂದ ನಿಯಾಮವಳಿಯಂತೆ ಫ್ರಾಂಚೈಸಿಯನ್ನು ಬಿಸಿಸಿಐ ವಜಾಗೊಳಿಸಿ, ಕೊಚ್ಚಿ ಫ್ರಾಂಚೈಸಿ ನೀಡಿದ್ದ ರೂ. 156 ಕೋಟಿ ಬ್ಯಾಂಕ್ ಗ್ಯಾರಂಟಿಯನ್ನೂ ಮುಟ್ಟುಗೊಲು ಹಾಕಿಕೊಂಡಿತ್ತು.
ವರದಿ ವಿರುದ್ಧ ಮೇಲ್ಮನವಿ?
ನಿವೃತ್ತ ನ್ಯಾಯಮೂರ್ತಿ ಲಹೋಟಿ ನೇತೃತ್ವದ ನ್ಯಾಯ ಪಂಚಾಯಿತಿ ಸಮಿತಿ ನೀಡಿರುವ ವರದಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಬಿಸಿಸಿಐ, ಇದರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ``ವರದಿಯ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆಂದು ಬಹುತೇಕ ಸದಸ್ಯರು ಒತ್ತಾಯಿಸಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು'' ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ
Advertisement