ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ಹೀನಾಯ ಸೋಲು

ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ದ ಆಸ್ಟ್ರೇಲಿಯಾ ತಂಡ, ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು 169 ರನ್‍ಗಳಿಂದ ಸೋತಿರುವುದು ಆ ತಂಡಕ್ಕೆ ...
ಇಂಗ್ಲೆಂಡ್ ಕ್ರಿಕೆಟ್ ತಂಡ
ಇಂಗ್ಲೆಂಡ್ ಕ್ರಿಕೆಟ್ ತಂಡ
Updated on

ಕಾರ್ಡಿಫ್: ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ದ ಆಸ್ಟ್ರೇಲಿಯಾ ತಂಡ, ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು 169 ರನ್‍ಗಳಿಂದ ಸೋತಿರುವುದು ಆ ತಂಡಕ್ಕೆ ಭಾರಿ ಮುಖಭಂಗವನ್ನುಂಟು ಮಾಡಿದೆ. ಪಂದ್ಯ ಗೆಲ್ಲಲು 412 ರನ್ ಗುರಿ ಪಡೆದಿದ್ದ ಕಾಂಗರೂಪಡೆ ಆ ಗುರಿಯನ್ನು ಸಾಧಿಸಿದ್ದರೇ ಮೂರು ದಾಖಲೆ ಗಳನ್ನು ಸೃಷ್ಟಿಸಬಹುದಾಗಿತ್ತು. ಆದರೆ, ಹಾಗಾಗಲಿಲ್ಲ. ಗೆಲವಿನ ಮರೀಚಿಕೆಯನ್ನು ಬೆನ್ನತ್ತಿದ ಕಾಂಗರೂ ಪಡೆ,ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ 242 ಮೊತ್ತಕ್ಕೆ ಆಲೌಟ್ ಆಗುವ ಮೂಲಕ, 169 ರನ್‍ಗಳ ಸೋಲು ಕಂಡಿತು.

 ಗರಿಷ್ಠ ಯಶಸ್ವಿ ಚೇಸಿಂಗ್
ಹಾಗೊಂದು ವೇಳೆ, 416 ರನ್ ಗುರಿಯನ್ನು ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿ ಬೆನ್ನಟ್ಟಿದ್ದರೆ ಆಶಸ್ ಇತಿಹಾಸದಲ್ಲೇ ದೊಡ್ಡ ಗುರಿಯನ್ನು ಮೆಟ್ಟಿದ ಹಿರಿಮೆಗೆ ಆಸ್ಟ್ರೇಲಿಯಾ ತಂಡ ಭಾಜನವಾಗುತ್ತಿತ್ತು.ಈ ಹಿಂದೆ, 1948ರಲ್ಲಿ ಲೀಡ್ಸ್‍ನಲ್ಲಿ ನಡೆದಿದ್ದ ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, 404 ರನ್‍ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತ್ತು. ಅದೇ ಈವರೆಗೂ ಆಶಸ್ ಸರಣಿಯ ಬಹುದೊಡ್ಡ ಯಶಸ್ವಿ ಚೇಸಿಂಗ್ ಎಂದು ಹೆಸರು ಪಡೆದಿದೆ.

ಟೆಸ್ಟ್ ಇತಿಹಾಸದಲ್ಲೊಂದು ಮೈಲಿಗಲ್ಲು
ಜಾಗತಿಕ ಟೆಸ್ಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತವನ್ನು ಚೇಸ್ ಮಾಡಿದ ಹೆಗ್ಗಳಿಕೆಗೂ ಆಸ್ಟ್ರೇಲಿಯಾ ತಂಡ ಶನಿವಾರ ಭಾಜನವಾಗಬಹುದಿತ್ತು. 1948ರಲ್ಲಿ ಲೀಡ್ಸ್ ನಲ್ಲಿ ನಡೆದಿದ್ದ ಅಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮುಟ್ಟಿದ್ದ 404 ರನ್ ಗುರಿಯೇ ಆ ತಂಡಟೆಸ್ಟ್ ಇತಿಹಾಸದಲ್ಲಿ ಈ ವರೆಗೆ ದಾಖಲಿಸಿದ್ದ ಅತಿ ದೊಡ್ಡ ಚೇಸಿಂಗ್ ಎಂದೆನಿಸಿದೆ. ಶನಿವಾರ ಈ ಹಳೆಯ ಹಿರಿಮೆಯನ್ನು ಅಳಿಸಿ, ಹೊಸತೊಂದು ಕೀರ್ತಿಯನ್ನು ಹುಟ್ಟುಹಾಕಲು ಕಾಂಗರೂ ಪಡೆಗೆ ಅವಕಾಶವಿತ್ತು
.
ಮೂರನೇ ಸ್ಥಾನದಿಂದ ವಂಚಿತ

ಟೆಸ್ಟ್ ಇತಿಹಾಸದಲ್ಲಿ, ಅತಿ ದೊಡ್ಡ ಗುರಿಗಳನ್ನುಯಶಸ್ವಿಯಾಗಿ ಮುಟ್ಟಿದ ಕೀರ್ತಿ ಕ್ರಮವಾಗಿ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳಪಾಲಿಗಿದೆ. 2002-03ರಲ್ಲಿ ಸೇಂಟ್ ಜಾನ್ಸ್ ನಲ್ಲಿ  ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ  ವೆಸ್ಟ್ ಇಂಡೀಸ್ ಪಡೆ,ಆಸ್ಟ್ರೇಲಿಯಾ ತಂಡವನ್ನು 418 ರನ್‍ಗಳ ಗುರಿ ಮುಟ್ಟಿ 7 ವಿಕೆಟ್‍ಗಳ ಅಂತರದಲ್ಲಿ ಸೋಲಿಸಿತ್ತು 2008-09 ರಲ್ಲಿ ಪರ್ತ್ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ನೀಡಿದ್ದ 414 ರನ್ ಗಳ ಗುರಿ ಮುಟ್ಟಿ ಮುಟ್ಟಿ, 4 ವಿಕೆಟ್‍ಗಳ ಗೆಲವು ಪಡೆದಿತ್ತು. ಇನ್ನು, ಭಾರತ ತಂಡ, 1975-76ನೇ ವರ್ಷದ ಅವಧಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 406 ರನ್‍ಗಳ ಚೇಸಿಂಗ್ ಮಾಡುವ ಮೂಲಕ, 6ವಿಕೆಟ್‍ಗಳ ಜಯ ಸಂಪಾದಿಸಿತ್ತು. ಈ ಮೂರೂ
 ಫಲಿತಾಂಶಗಳು ಈವರೆಗಿನ ಟೆಸ್ಟ್ ಇತಿಹಾಸದಲ್ಲಿ ಟಾಪ್ ಮೂರು ಯಶಸ್ವಿ ಚೇಸಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶನಿವಾರ ನೆಡದ ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 412 ರನ್ ಗುರಿ ಮುಟ್ಟಿದ್ದರೆ, ಭಾರತ ತಂಡವನ್ನು ಹಿಂದಿಕ್ಕಿ ಮೂರನೇ ಅತ್ಯುತ್ತಮ ಸಿಂಗ್ ಎಂಬ ಹಿರಿಮೆ ಪಡೆಯಬಹುದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com