
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ನಡೆದ ಲಂಚ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಂಬೈ ರಣಜಿ ಕ್ರಿಕೆಟಿಗ ಹಿಕೆನ್ ಶಾ ಅವರನ್ನು ಬಿಸಿಸಿಐ ಸೋಮವಾರ ಅಮಾನತು ಮಾಡಿದೆ.
ಹಿಕೆನ್ ಶಾ ಅವರು ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರೊಬ್ಬರಿಗೆ ಲಂಚ ಆಮಿಷವೊಡ್ಡಿದ ಆರೋಪ ಎದುರಿಸುತಿದ್ದರು.ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆ ವೇಳೆ ಹಿಕೆನ್ ಶಾ ವಿರುದ್ಧದ ಆರೋಪ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ಶಾ ಅವರನ್ನು ಅಮಾನತು ಮಾಡಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು, ವಿಚಾರಣೆ ವೇಳೆ ಹಿಕೆನ್ ಶಾ ಭ್ರಷ್ಟಾಚಾರ ವಿರೋಧಿ ನೀತಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಸಾಬೀತಾಗಿದೆ. ಹಾಗಾಗಿ ಶಿಸ್ತು ಸಮಿತಿ ಸೂಕ್ತ ಆದೇಶ ನೀಡುವವರೆಗೂ ಹಿಕೆನ್ ಶಾ ಅವರನ್ನು ಬಿಸಿಸಿಐಗೆ ಸಂಬಂಧಪಟ್ಟ ಎಲ್ಲ ಪಂದ್ಯಗಳಿಂದಲೂ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
Advertisement