
ಚೆನ್ನೈ: ನ್ಯಾಯಮೂರ್ತಿ ಲೋಧ ಸಮಿತಿ, ಎರಡು ಐ ಪಿ ಎಲ್ ತಂಡಗಳನ್ನು ಎರಡು ವರ್ಷದವರೆಗೆ ಅಮಾನತು ಮಾಡಿ ತೀರ್ಪು ಕೊಟ್ಟ ಒಂದು ದಿನದ ನಂತರ ಬುಧವಾರ ಬಿಸಿಸಿಐ ಆಟಗಾರರ ಹಿತಾಸಕ್ತಿ ಕಾರಣ ನೀಡಿ ಅಮಾನತುಗೊಂಡ ತಂಡಗಳ ರಕ್ಷಣೆಗೆ ಮುಂದಾಗಿದೆ.
ಇಂಡಿಯಾ ಸಿಮೆಂಟ್ಸ್ ಒಡೆತನದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಜೈಪುರ್ ಐಪಿಎಲ್ ಪ್ರೈವೆಟ್ ಲಿಮಿಟೆಡ್ ಒಡೆತನದ ರಾಜಸ್ಥಾನ ರಾಯಲ್ಸ್ ತಂಡಗಳ ಆಟಗಾರರ ಹಿತರಕ್ಷನಯೇ ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಬಿಸಿಸಿಐ ಪರಿಗಣಿಸಿದೆ.
"ಈ ವಿಷಯದ ಸುತ್ತ ನಮ್ಮ ಚರ್ಚೆ ನಡೆದಿತ್ತು ಹಾಗೂ ಬಿಸಿಸಿಐ ಸಮಿತಿ ಎರಡು ವರ್ಷಗಳವರೆಗೆ ಈ ಎರಡೂ ತಂಡಗಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಮಂಡಲಿಗೆ ತಲೆನೋವಾಗಿ ಪರಿಣಮಿಸಿರುವುದು ಆಸಕ್ತಿಯ ಸಂದಿಗ್ಧತೆ ಮತ್ತು ಆಟಗಾರರಿಗೆ ಎಷ್ಟು ಹಣ ನಿಡಬೇಕೆಂಬುದು.
ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಮತ್ತು ಐಪಿಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರ ನಡುವೆ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ದಾಲ್ಮಿಯಾ ಅವರಿಗೆ ಐಪಿಲ್ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ ಆಸಕ್ತಿ ಇಲ್ಲ ಎಂದು ತಿಳಿದುಬಂದಿದೆ. ತಂಡಗಳ ಸಂಖ್ಯೆ ೧೦ಕ್ಕೂ ಮೀರಿದರೆ ಐಪಿಎಲ್ ಸರಣಿಯನ್ನು ನಿಗದಿತ ಸಮಯದಲ್ಲಿ ಸಂಫೂರ್ಣಗೊಳಿಸಲು ಕಷ್ಟವಾಗುತ್ತದೆ ಮತ್ತು ಅದು ೬೦-೬೫ ದಿನಗಳನ್ನು ಮೀರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಅಲ್ಲದೆ ಕೇವಲ ಎರಡು ವರ್ಷಗಳಿಗೆ ಮಾತ್ರ ಭಾಗವಹಿಸಲು ಯಾವ ಫ್ರಾಂಚೈಸಿಯೂ ಬಯಸುವುದಿಲ್ಲ ಎಂದಿದ್ದಾರೆ.
Advertisement