ಭಾರತ-ದಕ್ಷಿಣ ಆಫ್ರಿಕಾ ವೇಳಾ ಪಟ್ಟಿ ಪ್ರಕಟ

ಬಲಿಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು ಅಕ್ಟೋಬರ್ ತಿಂಗಳಿನಲ್ಲಿ ಮುಖಾಮುಖಿಯಾಗಲಿವೆ...
ಮಹೇಂದ್ರ ಸಿಂಗ್ ಧೋನಿ, ಎಬಿ ಡಿವಿಲರ್ಸ್
ಮಹೇಂದ್ರ ಸಿಂಗ್ ಧೋನಿ, ಎಬಿ ಡಿವಿಲರ್ಸ್

ನವದೆಹಲಿ: ಬಲಿಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು ಅಕ್ಟೋಬರ್ ತಿಂಗಳಿನಲ್ಲಿ ಮುಖಾಮುಖಿಯಾಗಲಿವೆ.

ದಕ್ಷಿಣ ಆಫ್ರಿಕಾ ಭಾರತ ನೆಲದಲ್ಲಿ ಆಡಲಿರುವ ಅತ್ಯಂತ ಸುದೀರ್ಘ ಪ್ರವಾಸ ಇದಾಗಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 4 ಟೆಸ್ಟ್ ಪಂದ್ಯಗಳು, 5 ಏಕದಿನ ಪಂದ್ಯ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿವೆ. ಒಟ್ಟು 72 ದಿನಗಳ ಕಾಲ ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತನ ನೀಡಲಿದೆ.

ಕ್ರಿಕೆಟ್ ಸರಣಿ ವೇಳಾಪಟ್ಟಿ

ಟಿ20 ಸರಣಿ ವೇಳಾಪಟ್ಟಿ
ಮೊದಲ ಪಂದ್ಯ ಅಕ್ಟೋಬರ್ 2ರಂದು ಧರ್ಮಶಾಲಾ
ದ್ವಿತೀಯ ಪಂದ್ಯ ಅಕ್ಟೋಬರ್ 5ರಂದು ಕಟಕ್
ತೃತೀಯ ಪಂದ್ಯ ಅಕ್ಟೋಬರ್ 8ರಂದು ಕೋಲ್ಕತಾ

ಏಕದಿನ ಕ್ರಿಕೆಟ್ ಸರಣಿ
ಮೊದಲ ಪಂದ್ಯ ಅಕ್ಟೋಬರ್ 11 ಕಾನ್ಪುರ
ದ್ವಿತೀಯ ಪಂದ್ಯ ಅಕ್ಟೋಬರ್ 14 ಇಂದೋರ್
ತೃತೀಯ ಪಂದ್ಯ ಅಕ್ಟೋಬರ್ 18 ರಾಜಕೋಟ್
ನಾಲ್ಕನೇ ಪಂದ್ಯ ಅಕ್ಟೋಬರ್ 22 ಚೆನ್ನೈ
ಐದನೇ ಪಂದ್ಯ ಅಕ್ಟೋಬರ್ 25 ಮುಂಬೈ

ಟೆಸ್ಟ್ ಸರಣಿ
ಮೊದಲ ಟೆಸ್ಟ್ ನವೆಂಬರ್ 5-9 ಮೊಹಾಲಿ
ದ್ವಿತೀಯ ಟೆಸ್ಟ್ ನವೆಂಬರ್ 14-18 ಬೆಂಗಳೂರು
ತೃತೀಯ ಟೆಸ್ಟ್ ನವೆಂಬರ್ 25-29 ನಾಗಪುರ
ನಾಲ್ಕನೇ ಟೆಸ್ಟ್ ಡಿಸೆಂಬರ್ 3-7 ದೆಹಲಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com