
ಮುಂಬೈ: ಮುಂಬರುವ ಶ್ರೀಲಂಕಾ ಪ್ರವಾಸ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರು ತನ್ನ ಪತ್ನಿ ಅಥವಾ ಗರ್ಲ್‌ಫ್ರೆಂಡ್‌ನ್ನು ಜತೆಗೆ ಕರೆದುಕೊಂಡು ಹೋಗುವಂತಿಲ್ಲ ಎಂದು ಬಿಸಿಸಿಐ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿನ ಪ್ರವಾಸ ಪಂದ್ಯ ಮುಗಿಸಿ ಕ್ರೀಡಾಪಟುಗಳು ಒಂದು ತಿಂಗಳ ಬ್ರೇಕ್ ತೆಗೆದುಕೊಂಡ ನಂತರವೇ ಮರಳಿದ್ದಾರೆ. ಅದಷ್ಟು ಕಾಲ ಅವರು ತಮ್ಮ ಕುಟುಂಬದವರೊಂದಿಗೆ ಕಳೆದಿರುತ್ತಾರೆ. ಹೀಗಿರುವಾಗ ಅವರ ಪತ್ನಿ ಅಥವಾ ಗರ್ಲ್ ಫ್ರೆಂಡ್‌ನ್ನು ಜತೆಗೆ ಕರೆದುಕೊಂಡು ಹೋಗಲು ನಾವು ಅನುಮತಿ ನೀಡುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
ಬಿಸಿಸಿಐ ಡಂಕನ್ ಫ್ಲೆಂಚರ್ ಸ್ಥಾನಕ್ಕೆ ಇದುವರೆಗೆ ಯಾರನ್ನೂ ನೇಮಕ ಮಾಡದೇ ಇರುವ ಕಾರಣ ಟೀಂ ಇಂಡಿಯಾ ಹೆಡ್ ಕೋಚ್ ಇಲ್ಲದೆಯೇ ಪ್ರವಾಸ ಹೊರಡಲಿದೆ. ಟೀಂ ನಿರ್ದೇಶಕ ರವಿ ಶಾಸ್ತ್ರಿ ಈಗ ಇಂಗ್ಲೆಂಡ್‌ನಲ್ಲಿರುವ ಕಾರಣ ಅವರೂ ಕೂಡಾ ಟೀಂನೊಂದಿಗೆ ಇರುವುದಿಲ್ಲ. ಅಗಸ್ಟ್ 6 ಕ್ಕೆ ಪಂದ್ಯ ಆರಂಭವಾಗಲಿದ್ದು, ರವಿ ಶಾಸ್ತ್ರಿ ಅಗಸ್ಟ್ 12 ರಂದು ಶ್ರೀಲಂಕಾಗೆ ತಲುಪಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
Advertisement