ಗೇಯ್ಲ್ ರನ್ ರಸದೌತಣ

ಒಂದು ಇನಿಂಗ್ಸ್‍ನಲ್ಲಿ ಬರೋಬ್ಬರಿ 15 ಸಿಕ್ಸರ್ ಯಾರಾದ್ರೂ ಹೊಡೆಯಬಲ್ಲರಾ ಅಂತ ಯಾರಾದ್ರೂ ಕ್ರಿಕೆಟ್ ಅಭಿಮಾನಿಗಳನ್ನು ಕೇಳಿದರೆ ಅವರಿಂದ ಮೊದಲು ಬರೋ ಹೆಸರು - ಕ್ರಿಸ್ ಗೇಯ್ಲ್...
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್

ಲಂಡನ್: ಒಂದು ಇನಿಂಗ್ಸ್‍ನಲ್ಲಿ ಬರೋಬ್ಬರಿ 15 ಸಿಕ್ಸರ್ ಯಾರಾದ್ರೂ ಹೊಡೆಯಬಲ್ಲರಾ ಅಂತ ಯಾರಾದ್ರೂ ಕ್ರಿಕೆಟ್ ಅಭಿಮಾನಿಗಳನ್ನು ಕೇಳಿದರೆ ಅವರಿಂದ ಮೊದಲು ಬರೋ ಹೆಸರು - ಕ್ರಿಸ್ ಗೇಯ್ಲ್.

ಹೌದು. ವೆಸ್ಟ್ ಇಂಡೀಸ್‍ನ ಈ ದೈತ್ಯ ಪ್ರತಿಭೆ ಜಾಗತಿಕ ಕ್ರಿಕೆಟ್ ನಲ್ಲಿ ಮೂಡಿಸಿರುವ ಛಾಪು ಅಂಥದ್ದು. ಅಂತಹ ಕ್ರಿಸ್ ಗೇಯ್ಲ್ ದೂರದ ಲಂಡನ್ ನಲ್ಲಿ ಮತ್ತೊಂದು ರನ್ ಗಳ ರಸದೌತಣ
ಉಣಬಡಿಸಿದ್ದಾರೆ. ಟಿ-20 ಬ್ಲಾಸ್ಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಅವರು, ಭಾನುವಾರ ಕೆಂಟ್ ತಂಡದ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಸಮರ್ ಸೆಟ್ ತಂಡದ ಪರ ಗುಡುಗಿದ್ದಾರೆ. ಕೇವಲ 62 ಎಸೆತಗಳಲ್ಲಿ 15 ಸಿಕ್ಸರ್, 10 ಬೌಂಡರಿ ಸೇರಿದಂತೆ ಅಜೇಯ 151 ರನ್ ಚಚ್ಚಿದ್ದಾರೆ ! ಆದರೆ, ಇಲ್ಲಿ ಒಂದು ನಿರಾಸೆಯ ಸಂಗತಿ ಎಂದರೆ ಗೇಯ್ಲ್ ರ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಸಮರ್‍ಸೆಟ್ ತಂಡ ಸೋತಿದೆ.

ಟಾಟನ್ ಕಂಟ್ರಿ ಗ್ರೌಂಡ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಕೆಂಟ್ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಸಮರ್ ಸೆಟ್ ತಂಡದ ಪರ ಕ್ರಿಸ್ ಗೇಯ್ಲ್ ಹಾಗೂ ಟ್ರೆಸ್ಕೋಥಿಕ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಸಮರ್ ಸೆಟ್ ಕೇವಲ 22 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ತಂಡಕ್ಕೆ ಶಕ್ತಿ ತುಂಬಿದ ಕ್ರಿಸ್ ಗೇಯ್ಲ್, ಸಿಕ್ಸರ್, ಬೌಂಡರಿಗಳೊಂದಿಗೆ ಆರ್ಭಟಿಸಿದರು.

ಆದರೆ, ಗೇಯ್ಲ್  ಅವರ ಈ ಆಟ ಹೊಳೆಯಲ್ಲಿ ಹುಣಸೆ ತೊಳೆದಂತಾಯಿತು. ತಂಡದ ಯಾವೊಬ್ಬರಿಂದ ಕ್ರೀಸ್ ನಲ್ಲಿ ಅವರಿಗೆ ಉತ್ತಮ ಸಾಥ್ ಸಿಗದ ಹಿನ್ನಲೆಯಲ್ಲಿ ಸಮರ್‍ಸೆಟ್ 20 ಓವರ್‍ಗಳಲ್ಲಿ 224 ರನ್ ಗಳಿಸಿ, ಕೇವಲ 3 ರನ್‍ಗಳ ಸೋಲು ಅನುಭವಿಸಿತು. 151 ರನ್‍ಗಳೊಂದಿಗೆ ಗೇಯ್ಲ್  ಅಜೇಯರಾಗುಳಿದರು ಹಾಗೂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com