ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ

ದ್ವಿತೀಯ ಟೆಸ್ಟ್: ಆಂಗ್ಲರ ವಿರುದ್ಧ ಕಿವೀಸ್‍ಗೆ ಭರ್ಜರಿ ಜಯ

ನಿರೀಕ್ಷೆಯಂತೆ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಜಯ ಸಾಧಿಸಿದೆ.

ಲೀಡ್ಸ್: ನಿರೀಕ್ಷೆಯಂತೆ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಜಯ ಸಾಧಿಸಿದೆ.

ಗೆಲವಿಗಾಗಿ ತನ್ನ ದ್ವಿತೀಯ ಇನಿಂಗ್ಸ್‍ನಲ್ಲಿ 455 ರನ್‍ಗಳ ಬೃಹತ್ ಮೊತ್ತ ಪೇರಿಸುವ ಸವಾಲಿಗೆ ಸಿದ್ಧವಾಗಿದ್ದ ಇಂಗ್ಲೆಂಡ್ ಸೋಮವಾರ ನಾಲ್ಕನೇ ದಿನ ತನ್ನ ಇನಿಂಗ್ಸ್ ಆರಂಭಿಸಿತ್ತು. ಆದರೆ, ಇನಿಂಗ್ಸ್ ಆರಂಭಿಸಿದ ನಂತರ ಕೆಲವೇ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ದಿನದಾಟ ರದ್ದಾಯಿತು. ಮಂಗಳವಾರ ನಡೆದ ಪಂದ್ಯದ ಅಂತಿಮ ದಿನದಾಟದಲ್ಲಿ ಪಂದ್ಯ ಗೆಲ್ಲಲು 411 ರನ್ ಪೇರಿಸುವ ಒತ್ತಡದಲ್ಲಿದ್ದ ಆಂಗ್ಲರು, 91.5 ಓವರ್‍ಗಳಲ್ಲಿ 255 ರನ್ ಗಳಿಗೆ ಆಲೌಟ್ ಆದರು.

ನಿಗದಿತ ಗುರಿ ಮುಟ್ಟದಿದ್ದರೂ ವಿಕೆಟ್ ಉಳಿಸಿಕೊಂಡು ಆಡಿದ್ದರೆ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶ ಇಂಗ್ಲೆಂಡ್ ಪಾಲಿಗಿತ್ತು. ಆದರೆ, ಕಿವೀಸ್ ಬೌಲಿಂಗ್ ದಾಳಿಗೆ ಕಂಗೆಟ್ಟ ಆಂಗ್ಲರು ಪಂದ್ಯದಲ್ಲಿ ಭಾರೀ ಸೋಲು ಅನುಭವಿಸಿದ್ದಾರೆ. ಹೀಗಾಗಿ, ಎರಡು ಪಂದ್ಯಗಳ ಟೆಸ್ಟ್ ಸರಣಿಯು 1-1ರ ಸಮಬಲದಲ್ಲಿ ಡ್ರಾಗೊಂಡಿದೆ. ಸೋಮವಾರದ ದಿನದಾಟ ನಿಂತಾಗ, ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿದ್ದ ಇಂಗ್ಲೆಂಡ್ ಪಾಲಿಗೆ, ಕಿವೀಸ್ ಬೌಲರ್ ಗಳಾದ ಕ್ರೇಗ್ ಹಾಗೂ ವಿಲಿಯಮ್ಸನ್ ಸಿಂಹಸ್ವಪ್ನವಾದರು.

ಈ ಇಬ್ಬರೂ ತಲಾ 3 ವಿಕೆಟ್ ಪಡೆಯುವುದರೊಂದಿಗೆ ಇಂಗ್ಲೆಂಡ್ ಇನಿಂಗ್ಸ್ ಧ್ವಂಸಕ್ಕೆ ಕಾರಣವಾದರು. ಆರಂಭಕ ಕುಕ್ ಹಾಗೂ ಮಧ್ಯಮ ಕ್ರಮಾಂಕದ ಬಟ್ಲರ್ ಅವರಿಬ್ಬರು ಶತಕಾರ್ಧ ದಾಖಲಿಸಿದ್ದು ಬಿಟ್ಟರೆ, ಮಿಕ್ಯಾವ ಬ್ಯಾಟ್ಸ್  ಆಡಲಿಲ್ಲ. ಅಂತಿಮವಾಗಿ, ಇಂಗ್ಲೆಂಡ್ 255 ರನ್ ಮೊತ್ತಕ್ಕೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 350 ಹಾಗೂ 454 (ಡಿಕ್ಲೇರ್)
ಇಂಗ್ಲೆಂಡ್ 350 ಹಾಗೂ 255
ಕುಕ್ 56, ಬಟ್ಲರ್ 73; ವಿಲಿಯಮ್ಸನ್
15ಕ್ಕೆ 3, ಕ್ರೇಗ್ 73ಕ್ಕೆ 3.
ಪಂದ್ಯಶ್ರೇಷ್ಠ: ವ್ಯಾಟ್ಲಿಂಗ್
ಸರಣಿ ಶ್ರೇಷ್ಠ: ಟ್ರೆಂಟ್ ಬೌಲ್ಟ್ ಹಾಗೂ ಕುಕ್

Related Stories

No stories found.

Advertisement

X
Kannada Prabha
www.kannadaprabha.com