ಬಿಸಿಸಿಐನ ನೂತನ ಸಲಹಾ ಸಮಿತಿಯಲ್ಲಿ ದ್ರಾವಿಡ್ ಇರಬೇಕಿತ್ತು: ಕೊಹ್ಲಿ

ಬಿಸಿಸಿಐ ನ ನೂತನ ಸಲಹಾ ಸಮಿತಿಯಲ್ಲಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಬಿಸಿಸಿಐ ನ  ನೂತನ ಸಲಹಾ ಸಮಿತಿಯಲ್ಲಿ ಮಾಜಿ  ನಾಯಕ ರಾಹುಲ್ ದ್ರಾವಿಡ್ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು  ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ  ಕ್ರಿಕೆಟ್  ನ ಆಧಾರ  ಸ್ಥಂಭಗಳಾಗಿದ್ದ  ನಾಲ್ವರು ಪ್ರಮುಖ ಆಟಗಾರರು ಸಲಹಾ ಸಮಿತಿಯಲ್ಲಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರು ಬೇರೆ ಕಾರ್ಯದಲ್ಲಿ ತೊಡಗಿದ್ದರಿಂದ ಅದು ಸಾದ್ಯವಾಗಲಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ. ಕಳೆದವಾರ ರಚನೆಯಾದ  ಬಿಸಿಸಿಐ ಸಲಹಾ ಸಮಿತಿಯಲ್ಲಿ ಸಚಿನ್ ಟೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕ್ರಿಕೆಟ್ ಆಡಲು ಆರಂಭಿಸಿದ ನಂತರ ಈ  ದಿಗ್ಗಜ ಆಟಗಾರರನ್ನು ನೋಡಿ  ಕಲಿಯುವುದು ಸಾಕಷ್ಟಿದೆ. ಅವರು ಈ ಜವಾಬ್ದಾರಿಯನ್ನು  ವಹಿಸಿಕೊಂಡಿರುವುದರಿಂದ ನಮಗೆ ಸಾಕಷ್ಟು ಅಂಶಗಳಲ್ಲಿ  ನೆರವಾಗಲಿದೆ ಎಂದು  ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ನಿರ್ದೇಶಕರಾಗಿ ರವಿಶಾಸ್ತ್ರಿ ಅವರನ್ನು ಮುಂದುವರೆಸುವ ಬಿಸಿಸಿನ ನಿರ್ಧಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ರವಿಶಾಸ್ತ್ರಿ ಅವರು ತಂಡದ ಜೊತೆಗಿರುವಷ್ಟೂ ಆಟಗಾರರಿಗೆ ಹೆಚ್ಚು ನೆರವಾಗಲಿದೆ.  ಅವರು ಕ್ರಿಕೆಟ್ ನ್ನು ತಮ್ಮದೇ ಶೈಲಿಯಲ್ಲಿ ಆಡಿದ್ದಾರೆ ಪ್ರತಿ ಆಟಗಾರರಲ್ಲಿ ಆತ್ಮ  ವಿಶ್ವಾಸವನ್ನು  ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೊಹ್ಲಿ  ತಿಳಿಸಿದ್ದಾರೆ.

ಇನ್ನು ಟೆಸ್ಟ್ ತಂಡದ ನಾಯಕನಾಗಿ ಹೊಂದಿರುವ ಗುರಿ ಬಗ್ಗೆ ಮಾತನಾಡಿದ ಕೊಹ್ಲಿ, ನಿರೀಕ್ಷೆಗೆ ತಕ್ಕಂತೆ ಆಟ ಆಡುವುದು ಪ್ರಮುಖ ಗುರಿ. ತಂಡದಲ್ಲಿನ ಪ್ರತಿಯೊಬ್ಬ ಆಟಗಾರನಿಗೆ  ಮುಕ್ತವಾದ  ವಾತಾವರಣ ಕಲ್ಪಿಸುವ ಅಗತ್ಯವಿದೆ.  ಪ್ರತಿಯೊಬ್ಬರೂ ತಂಡಕ್ಕೆ ಉತ್ತಮ ಕಾಣಿಕೆ ನೀಡುವ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.       

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com