ಸಲಹಾ ಸಮಿತಿ ಹಸ್ತಕ್ಷೇಪ ಸಲ್ಲದು: ರವಿ ಶಾಸ್ತ್ರಿ

ಭಾರತ ಕೋಚ್ ಸ್ಥಾನವನ್ನು ರವಿಶಾಸ್ತ್ರಿ ಅವರು ಅಲಂಕರಿಸುವ ಮಾತುಗಳು ಇನ್ನು ಚರ್ಚೆಯಲ್ಲಿರುವಾಗಲೇ, ಸಲಹಾ ಸಮಿತಿಯ ಸದಸ್ಯರಾದ ಸಚಿನ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ತಮ್ಮ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಬಿಸಿಸಿಐಗೆ ತಿಳಿಸಿದ್ದಾರೆ.
ರವಿಶಾಸ್ತ್ರಿ
ರವಿಶಾಸ್ತ್ರಿ

ಮುಂಬೈ: ಭಾರತ ಕೋಚ್ ಸ್ಥಾನವನ್ನು ರವಿಶಾಸ್ತ್ರಿ ಅವರು ಅಲಂಕರಿಸುವ ಮಾತುಗಳು ಇನ್ನು ಚರ್ಚೆಯಲ್ಲಿರುವಾಗಲೇ, ಸಲಹಾ ಸಮಿತಿಯ ಸದಸ್ಯರಾದ ಸಚಿನ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ತಮ್ಮ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಬಿಸಿಸಿಐಗೆ ತಿಳಿಸಿದ್ದಾರೆ.

ಬಿಸಿಸಿಐ ಮುಕ್ತವಾದಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಕೇವಲ ಸಲಹಾ ಸಮಿತಿಯಲ್ಲಿರುವ ಮೂವರು ಆಟಗಾರರು ಹೇಳಿದಂತೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ. ಅಲ್ಲದೆ ಈ ಮಾಜಿ ಆಟಗಾರರು ತಮ್ಮ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ನ್ಯೂಸ್ ಹಂಟ್ ವರದಿ ಮಾಡಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಬಿಸಿಸಿಐ ಮುಂದಿನ ಎರಡು ವರ್ಷಗಳ ಅವ„ಯಲ್ಲಿ ರವಿಶಾಸಿuಉ ಅವರಿಗೆ ಮಹತ್ವದ ಜವಾಬ್ದಾರಿ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಈ ಕುರಿತು ಇನ್ನು ಕೆಲವು ಷರತ್ತುಗಳಿಗೆ ಒಪ್ಪಿಕೊಳ್ಳಬೇಕಿದೆ ಎಂದು ತಿಳಿದು ಬಂದಿದೆ.

ಟೀಂ ಇಂಡಿಯಾಗೆ ಔತಣಕೂಟ
ಬಾಂಗ್ಲಾದೇಶ ಪ್ರವಾಸದಲ್ಲಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಸದಸ್ಯರಿಗೆ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರು ಭಾನುವಾರ ರಾತ್ರಿ ಔತಣಕೂಟ ಆಯೋಜಿಸಿದ್ದರು. ಢಾಕಾದ ಪಾಶ್ ಗುಲ್ಷಾನ್‍ನಲ್ಲಿನ ಕ್ಲಬ್‍ವೊಂದರಲ್ಲಿ ರವಿಶಾಸ್ತ್ರಿ ಔತಣಕೂಟ ಆಯೋಜಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸಂಪೂರ್ಣ ಪ್ರಾಬಲ್ಯ ತೋರಿದ್ದು, ತಂಡಕ್ಕೆ ನೈತಿಕ ಜಯ ಸಿಕ್ಕಂತಾಗಿದೆ. ಇನ್ನು ಈ ಔತಣಕೂಟಕ್ಕೆ ಮತ್ತೊಂದು ಕಾರಣ ಎಂದರೆ, ಕೇವಲ ಟೆಸ್ಟ್ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದ, ಹರ್ಭಜನ್ ಸಿಂಗ್ ಮತ್ತು ವೃದ್ಧಿಮಾನ್ ಸಾಹ ಭಾರತಕ್ಕೆ ಮರಳುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿತ್ತು ತಂಡದ ಮೂಲಗಳು ತಿಳಿಸಿವೆ. ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತು ಇತರೆ ಆಟಗಾರರು ಬಾಂಗ್ಲಾಗೇ ತೆರಳಲಿದ್ದು, ಸೋಮವಾರ ವಿಶ್ರಾಂತಿ ಪಡೆದು ಮಂಗಳವಾರದಿಂದ ಮೀರ್ಪುರದ ಶೇರೆ ಬಾಂಗ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com