ಬೆಂಗಳೂರು: ಇದೇ ಮಾಸಾಂತ್ಯದ ವೇಳೆಗೆ ಆರಂಭವಾಗಲಿರುವ ಭಾರತ- ನ್ಯೂಜಿಲೆಂಡ್ ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಗಾಗಿ ಶುಕ್ರವಾರ ಭಾರತೀಯರ ಸಂಭಾವ್ಯರ
ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ದ ಹಿಂದೂ ವರದಿ ಮಾಡಿದೆ. ಅಲ್ಲದೆ, ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದೊಂದಿಗೆ ನಡೆಯುವ ಅಭ್ಯಾಸ ಪಂದ್ಯಗಳಿಗಾಗಿ ಭಾರತ ಎ ತಂಡವನ್ನೂ ಪ್ರಕಟಿಸಲಾಗಿದೆ.
ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರು, ಭಾರತ ರಾಷ್ಟ್ರೀಯ ತಂಡಕ್ಕೆ ನಾಯಕಿಯಾಗಿದ್ದರೆ, ಇದೇ ತಿಂಗಳ ಕೊನೆಯ ವಾರದಲ್ಲಿ ಭಾರತಕ್ಕೆ ಆಗಮಿಸಲಿರುವ ನ್ಯೂಜಿಲೆಂಡ್ ಮಹಿಳೆಯರ ತಂಡ, ಜೂ. 28ರಿಂದ ಆರಂಭಗೊಳ್ಳಲಿರುವ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಏಕದಿನ ಸರಣಿಯ ನಂತರ, ಜು. 11ರಿಂದ ಆರಂಭಗೊಳ್ಳಲಿರುವ ಮೂರು ಟಿ20 ಪಂದ್ಯಗಳ ಸರಣಿಯಲ್ಲೂ ಉಭಯ ತಂಡಗಳು ಪಾಲ್ಗೊಳ್ಳಲಿವೆ.ಎಲ್ಲಾ ಪಂದ್ಯಗಳೂ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿವೆ.
ಸಂಭಾವ್ಯರು: ಭಾರತ ರಾಷ್ಟ್ರೀಯ ತಂಡ: ಮಿಥಾಲಿ ರಾಜ್ (ನಾಯಕಿ), ಜುಲಾನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧನಾ, ಪೂನಮ್ ರವೂತ್, ಶಿಖಾ ಪಾಂಡೆ, ತಿರುಷ್ಕಾಮಿನಿ, ಕಲ್ಪನಾ ಆರ್. ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಏಕ್ತಾ ಬಿಶ್ತ್, ಸ್ನೇಹ್ ರಾಣಾ, ಪೂನಮ್ ಯಾದವ್, ನಿರಂಜನಾ ನಾಗರಾಜನ್,
ಎಸ್. ಶುಭಲಕ್ಷ್ಮಿ, ದೇವಿಕಾ ವೈದ್ಯ, ಪ್ರೀತಿ ಬೋಸ್, ಸುಷ್ಮಾ ವರ್ಮಾ, ವನಿತಾ ವಿ. ಆರ್ ಹಾಗೂ ಲತಿಕಾ ಕುಮಾರಿ. ಭಾರತ `ಎ' ತಂಡ: ವನಿತಾ ವಿ.ಆರ್ (ನಾಯಕಿ), ಮಧುಸ್ಮಿತಾ ಬೆಹೆರಾ, ಪರಮಿತಾ ರಾಯ್, ಪ್ರೀತಿ ಬೋಸ್, ಸಾರಿಕಾ ಕೋಲಿ, ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೇಘನಾ ಎಸ್., ತಾನಿಯಾ ಭಾಟಿಯಾ, ಸುಶ್ರೀ ಪ್ರಧಾನ್, ಸ್ನೇಹಲ್ ಪ್ರಧಾನ್, ಅನನ್ಯಾ ಉಪೇಂದ್ರನ್.
Advertisement