
ನವದೆಹಲಿ: ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನು ರದ್ದುಗೊಳಿಸಿದೆ. ಮುಂದಿನ ತಿಂಗಳು ಭಾರತದ ಕ್ರಿಕೆಟ್ ಟೀಂ ಜಂಬಾಬ್ವೆ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಬಿಸಿಸಿಐ ಮತ್ತು ಪಂದ್ಯದ ಪ್ರಸಾರ ಹೊಣೆ ಹೊತ್ತಿದ್ದ ಟೆನ್ ಸ್ಫೋರ್ಟ್ಸ್ ನಡುವೆ ಕೆಲವು ಸಮಸ್ಯೆ ತಲೆದೋರಿದ ಕಾರಣ ಪ್ರವಾಸ ರದ್ದು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಕ್ರಿಕೆಟ್ ತಂಡ ಬಿಡುವಿಲ್ಲದೆ ಆಡುತ್ತಿರುವ ಕಾರಣ ಅವರಿಗೆ ಸುಸ್ತಾಗಿದೆ. ಕ್ರೀಡಾಪಟುಗಳೀಗ ವಿಶ್ರಾಂತಿ ಅಗತ್ಯವಿದೆ. ಆದ್ದರಿಂದ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಕೆಲವೊಂದು ಮೂಲಗಳು ಹೇಳಿವೆ.
ಈ ಹಿಂದೆಯೇ ಜಿಂಬಾಬ್ವೆ ಪ್ರವಾಸದ ಪ್ರಸಾರ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಟೆನ್‌ಸ್ಫೋರ್ಟ್ಸ್ ನಡುವೆ ಸಮಸ್ಯೆಯುಂಟಾಗಿತ್ತು. ಏತನ್ಮಧ್ಯೆ, ತಾವು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರ ಮಾಡುತ್ತೇವೆ. ಭಾರತದೊಂದಿಗೆ ಕ್ರಿಕೆಟ್ ಆಡಲು ನಾವು ಕಾತರರಾಗಿದ್ದೇವೆ . ಈಗ ಆಡದೇ ಇದ್ದರೂ ಮುಂದಿನ ವರ್ಷ ಆಡುವ ಬಗ್ಗೆ ನಾವು ಆಶಾಭಾವನೆ ಹೊಂದಿದ್ದೇವೆ ಎಂದು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿತ್ತು.
Advertisement