ಡೆಲ್ಲಿ ಬಿಡಲು ಸೆಹ್ವಾಗ್ ಚಿತ್ತ?

ದೇಶಿಯ ಕ್ರಿಕೆಟ್ ಋತು ಆರಂಭವಾಗಲು ಇನ್ನು ಕೆಲ ತಿಂಗಳು ಬಾಕಿ ಉಳಿದಿದೆಯಾದರೂ, ಡೆಲ್ಲಿ ತಂಡವನ್ನು ಬಿಟ್ಟು ಬೇರೆ ತಂಡದಲ್ಲಿ ಆಡಲು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ನಿರ್ಧರಿಸಿದ್ದಾರೆ.
ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್

ನವದೆಹಲಿ: ದೇಶಿಯ ಕ್ರಿಕೆಟ್ ಋತು ಆರಂಭವಾಗಲು ಇನ್ನು ಕೆಲ ತಿಂಗಳು ಬಾಕಿ ಉಳಿದಿದೆಯಾದರೂ, ಡೆಲ್ಲಿ ತಂಡವನ್ನು ಬಿಟ್ಟು ಬೇರೆ ತಂಡದಲ್ಲಿ ಆಡಲು ಟೀಂ ಇಂಡಿಯಾ ಮಾಜಿ ಆಟಗಾರ  ವೀರೇಂದ್ರ ಸೆಹ್ವಾಗ್ ನಿರ್ಧರಿಸಿದ್ದಾರೆ.

 ವೀರೇಂದ್ರ ಸೆಹ್ವಾಗ್ ಅವರನ್ನು ತಮ್ಮ ತಂಡದಲ್ಲಿ ಆಡಿಸಲು ಎರಡು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಆಸಕ್ತಿ ತಳೆದಿದ್ದು ಆಹ್ವಾನ ಕೂಡ ನೀಡಿದ್ದು, ಸೆಹ್ವಾಗ್ ಕೂಡ ಇದನ್ನು ಗಂಭೀರವಾಗಿ  ಪರಿಣಗಣಿಸಿದ್ದಾರೆ ಎಂದು ತಿಳಿದುಬಂದಿದೆ.ಡೆಲ್ಲಿ ತಂಡದಲ್ಲಿ ಗೌತಮ್ ಗಂಭೀರ್, ಮಿಥುನ್ ಮನ್ಹಾಸ್ ಮತ್ತು ರಜತ್ ಭಾಟಿಯಾ ತಂಡದಲ್ಲಿದ್ದು, ಇವರ ಜತೆ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ  ನೀಡಲಾಗುತ್ತಿದೆ.

ಹಾಗಾಗಿ ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸೆಹ್ವಾಗ್ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ. 2013-14ನೇ ಸಾಲಿನ ರಣಜಿ ಟೂರ್ನಿಯಲ್ಲಿ ಎಂಟು ಪಂದ್ಯಗಳಿಂದ 51.63ರ ಸರಾಸರಿಯಲ್ಲಿ ಎರಡು ಶತಕ ಸೇರಿದಂತೆ 568 ರನ್ ದಾಖಲಿಸಿದರಾದರೂ, ವಿಜಯ್ ಹಜಾರೆ ಟ್ರೋಫಿಯಲ್ಲಿ 6  ಪಂದ್ಯಗಳಿಂದ ಕೇವಲ 131 ರನ್ ದಾಖಲಿಸಿ ನಿರಾಸೆ ಮೂಡಿಸಿದ್ದರು.

ಡೆಲ್ಲಿ ಸಂಸ್ಥೆಯೊಂದಿಗೆ ಮನಸ್ತಾಪ
ಡೆಲ್ಲಿ ಕ್ರಿಕೆಟ್ ಸಂಸ್ಥೆಯಲ್ಲಿ ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಮನಸ್ತಾಪ ಹೊಂದಿದ್ದ ಸೆಹ್ವಾಗ್ 2009ರಲ್ಲಿ ಸಂಸ್ಥೆಯಿಂದ ಹೊರ ನಡೆಯುವುದಾಗಿ ಎಚ್ಚರಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com