ಇಂದು ಮೊದಲ ಹಣಾಹಣಿ

ಇಂದಿನಿಂದ(ಭಾನುವಾರ) ಆರಂಭಗೊಳ್ಳಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಲು ಸಿದ್ಧವಾಗಿದೆ...
ಬೌಲಿಂಗ್ ಅಭ್ಯಾಸ ನಿರತ ಭಾರತ ತಂಡದ ಜೂಲನ್ ಗೋಸ್ವಾಮಿ
ಬೌಲಿಂಗ್ ಅಭ್ಯಾಸ ನಿರತ ಭಾರತ ತಂಡದ ಜೂಲನ್ ಗೋಸ್ವಾಮಿ
Updated on

ಬೆಂಗಳೂರು: ಅನುಭವಿ ಆಟಗಾರ್ತಿ ಮಿಥಾಲಿರಾಜ್ ಅವರ ನಾಯಕತ್ವದಡಿ ಸನ್ನದ್ಧಗೊಂಡಿರುವ ಭಾರತ ಮಹಿಳೆಯರ ಕ್ರಿಕೆಟ್ ತಂಡ, ಇಂದಿನಿಂದ(ಭಾನುವಾರ) ಆರಂಭಗೊಳ್ಳಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಲು ಸಿದ್ಧವಾಗಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉಭಯ ತಂಡಗಳ ಐದು ಏಕದಿನ ಪಂದ್ಯಗಳ ಈ ಸರಣಿ, ಎರಡೂ ತಂಡಗಳಿಗೆ ಸವಾಲಿನದ್ದಾಗಿದ್ದು,ಸರಣಿಯಲ್ಲಿ ಮೇಲುಗೈ ಸಾಧಿಸಲು ಹಾಗೂ ಐಸಿಸಿ ರ್ಯಾಂಕಿಂಗ್ ನಲ್ಲಿ ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಂಡು 2017ರ ಐಸಿಸಿ ಮಹಿಳೆಯರ ವಿಶ್ವಕಪ್ ಪಂದ್ಯಾವಳಿಯ ಅರ್ಹತೆ ಗಿಟ್ಟಿಸಿಕೊಳ್ಳುವ ಗುರಿ ಹೊತ್ತಿವೆ.

ಕಳೆದ ವರ್ಷ ನವೆಂಬರ್ ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದ ನಂತರ, ಭಾರತ ತಂಡ ಈ ವರ್ಷ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದೆ.

 ತಂಡದಲ್ಲಿ ಅನುಭವಿ ಹಾಗೂ ಹೊಸ ಆಟಗಾರರ ಸಮ್ಮಿಶ್ರಣದಿಂದ ಕೂಡಿದ್ದರೂ, ಬಲಿಷ್ಠ ತಂಡವಾಗಿರುವ ನ್ಯೂಜಿಲ್ಯಾಂಡ್ ತಂಡವನ್ನು ಸಮರ್ಥವಾಗಿ ಎದುರಿಸುವ ಅಸ್ತ್ರಗಳು ಭಾರತೀಯ ಪಡೆಯಲ್ಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com