ಕ್ರಿಕೆಟ್ ತಂಡದಲ್ಲಿ ರಾಜ್ಯದ ಮೂವರು: ಮರುಕಳಿಸಿದ ಹಳೆಯ ನೆನಪು

ಜಾವ್ಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಷಿ ನಂತರ ಮೂವರು ಕರ್ನಾಟಕದ ಆಟಗಾರರು ಮತ್ತೊಮ್ಮೆ ಒಟ್ಟಿಗೆ ಭಾರತ ತಂಡದಲ್ಲಿ ಆಡಲಿದ್ದಾರೆ.
ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ಮನೀಶ್ ಪಾಂಡೆ (ಸಂಗ್ರಹ ಚಿತ್ರ)
ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ಮನೀಶ್ ಪಾಂಡೆ (ಸಂಗ್ರಹ ಚಿತ್ರ)

ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ, ಜಾವ್ಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಷಿ ನಂತರ ಮೂವರು ಕರ್ನಾಟಕದ ಆಟಗಾರರು ಮತ್ತೊಮ್ಮೆ ಒಟ್ಟಿಗೆ ಭಾರತ ತಂಡದಲ್ಲಿ ಆಡಲಿದ್ದಾರೆ.

ಜಿಂಬಾಂಬ್ವೆ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿರುವ ಆಯ್ಕೆ ಸಮಿತಿ ಕರ್ನಾಟಕದ ಮೂವರು ಆಟಗಾರರನ್ನು ಆಯ್ಕೆ ಮಾಡಿದ್ದು, ಜಾವ್ಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಅವಧಿಯ ಭಾರತ ತಂಡವನ್ನು ನೆನಪು ಮಾಡಿದೆ. ರಾಜ್ಯದ ರಾಬಿನ್ ಉತ್ತಪ್ಪ, ವಿಕೆಟ್ ಕೀಪರ್, ಆಲ್ರೌಂಡರ್ ಸ್ಟುವರ್ಟ್ ಬಿನ್ನಿ, ಮನೀಶ್ ಪಾಂಡೆ ಜಿಂಬಾಬ್ವೆ ಪ್ರವಾಸದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.    

ಹಲವು ಐಪಿಎಲ್ ತಂಡಗಳನ್ನು ಪ್ರತಿನಿಧಿಸುತ್ತಿರುವ ಕನ್ನಡಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ತುದಿಗಾಲಲ್ಲಿ ಕಾಯುತ್ತಿದ್ದಾರೆ ಎಂದು ಕರ್ನಾಟಕ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಬ್ರಜೇಶ್ ಪಟೇಲ್ ಹೇಳಿದ್ದರು, ಈಗ ಭಾರತ ತಂಡದಲ್ಲಿ ಮೂವರು ಕರ್ನಾಟದ ಆಟಗಾರರು ಸ್ಥಾನ ಪಡೆದಿರುವುದು ಬ್ರಜೇಶ್ ಪಟೇಲ್ ಹೇಳಿಕೆಯನ್ನು ಸಾಬೀತುಪಡಿಸಿದೆ .

ಧವಳ್ ಕುಲಕರ್ಣಿ, ಬಿನ್ನಿ, ಭುವನೇಶ್ವರ್ ಕುಮಾರ್, ಮೋಹಿತ್ ಶರ್ಮಾ, ಸಂದೀಪ್ ಶರ್ಮಾ ತಂಡಕ್ಕೆ ಮರಳಿದ್ದಾರೆ, ಕರ್ನಾಟಕದ ಮತ್ತೊಬ್ಬ ಆಟಗಾರ ಆರ್. ವಿನಯ್ ಕುಮಾರ್ ಗೆ ಸ್ಥಾನ ದೊರೆಯದೆ ಇರುವುದು ಬೇಸರದ ಸಂಗತಿ. 2014 ರ ಏಷ್ಯಾ ಕಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಈ ವರ್ಷ ನಡೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸ್ಟುವರ್ಟ್ಸ್ ಬಿನ್ನಿ ಉತ್ತಮ ಪ್ರದರ್ಶನ ನೀಡಿದ್ದರು. 4 ರನ್ ಗಳನ್ನು ನೀಡಿ 6 ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com