ಆಫ್ಘನ್ ಕನಸು ಛಿದ್ರ ಮಾಡಿದ ಕಿವೀಸ್

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಆಫ್ಗನ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕಿವೀಸ್ ತಂಡ ಟೂರ್ನಿಯಲ್ಲಿ ತನ್ನ ಸತತ 5ನೇ ಗೆಲುವು ದಾಖಲಿಸಿದೆ...
ನ್ಯೂಜಿಲೆಂಡ್ ತಂಡ
ನ್ಯೂಜಿಲೆಂಡ್ ತಂಡ

ನೇಪಿಯರ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಆಫ್ಗನ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕಿವೀಸ್ ತಂಡ ಸತತ 5ನೆ ಗೆಲುವು ದಾಖಲಿಸಿದೆ.

ನೇಪಿಯರ್ ನಲ್ಲಿ ನಡೆದ ಗ್ರೂಪ್-ಎ ವಿಭಾಗದ ಮಹತ್ವದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಆಫ್ಘಾನಿಸ್ಥಾನ ತಂಡ ಕಿವೀಸ್ ಪ್ರಭಾವಿ ಬೌಲಿಂಗ್ ಎದುರು ಮಂಕಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ತಂಡ ಕೇವಲ 186 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.  187 ರನ್ ಗಳ ಸಾಧಾರಣ ಮೊತ್ತದ ಗುರಿ ಬೆನ್ನುಹತ್ತಿದ ನ್ಯೂಜಿಲೆಂಡ್  ಕೇವಲ 36  ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಭರ್ಜರಿ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ನಡೆಸಿದ ಆಫ್ಘಾನಿಸ್ತಾನ ಆರಂಭಿಕ ಆಟಗಾರರಾದ ಜಾವಿದ್ ಅಹಮದಿ ಮತ್ತು  ಉಸ್ಮಾನ್ ಘಾನಿ  ಅವರ ವಿಕೆಟ್ ಅನ್ನು ಬಹುಬೇಗನೆ ಕಳೆದುಕೊಂಡಿತು.  ಕೀವಿಸ್‌ನ ವೇಗಿ ಬೋಲ್ಟ್ ಅವರು ಜಾವಿದ್ (1)ರನ್ನು ಪೆವಿಲಿಯನ್ ಗೆ ಅಟ್ಟಿದರೆ, ಮೂರನೆ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದ ವಿಟ್ಟೋರಿ ರನ್ ಗಳಿಸಲು ಪರದಾಡುತ್ತಿದ್ದ ಘಾನಿ (0) ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ನವ್ ರೋಜ್ ಮಂಗೋಲಿ (27 ರನ್), ಸಮಿಉಲ್ಲಾ ಶೆನ್ವಾರಿ (54 ರನ್), ಅವರನ್ನು ಹೊರತು ಪಡಿಸಿದರೆ ಆಫ್ಘಾನಿಸ್ತಾನದ ಯಾವೊಬ್ಬ ಆಟಗಾರನೂ ಕೂಡ ನ್ಯೂಜಿಲೆಂಡ್ ನ ಬೌಲರ್ ಗಳಿಗೆ ಪ್ರಭಾವಿ ಉತ್ತರ ನೀಡಲೇ ಇಲ್ಲ. ಅಂತಿಮವಾಗಿ ಆಫ್ಘಾನಿಸ್ತಾನ ತಂಡ 47.4 ಓವರ್ ಗಳಲ್ಲಿ ಕೇವಲ 186 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ 187 ರನ್ ಗಳ ಗುರಿ ನೀಡಿತು. ನ್ಯೂಜಿಲೆಂಡ್ ಪರ ವೆಟ್ಟೋರಿ 4 ವಿಕೆಟ್ ಕಬಳಿಸಿದರೆ, ಬೌಲ್ಟ್ 3 ವಿಕೆಟ್, ಆ್ಯಂಡರ್ ಸನ್ 2 ವಿಕೆಟ್ ಮತ್ತು ಮಿಲ್ನೆ 1 ವಿಕೆಟ್ ಪಡೆದು ಮಿಂಚಿದರು.

187 ರನ್ ಗಳ ಸಾಧಾರಣ ಮೊತ್ತವನ್ನು ಬೆಂಬತ್ತಿದ ಕಿವೀಸ್ ಪಡೆ ಗಪ್ಟಿಲ್ (57 ರನ್), ವಿಲಿಯಮ್ಸ್ ಸನ್ (33 ರನ್), ಟೇಲರ್ (ಅಜೇಯ 24 ರನ್) ಮತ್ತು ಮೆಕಲಮ್ (42 ರನ್) ಅವರ ನೆರವಿನಿಂದ ಕೇವಲ 36.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆಫ್ಘಾನಿಸ್ತಾನ ಪರ ಷಪೂರ್ ಝಾರ್ಡನ್ ಮತ್ತು ಮಹಮದ ನಭಿ ತಲಾ 1 ವಿಕೆಟ್ ಪಡೆದರು. ತಮ್ಮ ಮೊನಚಾದಿ ಸ್ಪಿನ್ ದಾಳಿಯಿಂದ ಆಫ್ಘನ್ ದಾಂಡಿಗರನ್ನು ಕಟ್ಟಿಹಾಕಿದ ಡೇನಿಯಲ್ ವೆಟ್ಟೋರಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com