ಭಾರತ vs ಐರ್ಲೆಂಡ್ : ಟೀಂ ಇಂಡಿಯಾಗೆ 8 ವಿಕೆಟ್‌ಗಳ ಭರ್ಜರಿ ಜಯ

ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಭಾರತ ಗೆಲವು ಸಾಧಿಸಿದೆ. ವಿಶ್ವಕಪ್...
ಟೀಂ ಇಂಡಿಯಾ
ಟೀಂ ಇಂಡಿಯಾ

ಸೆಡನ್ ಪಾರ್ಕ್, ಹ್ಯಾಮಿಲ್ಟನ್: ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಭಾರತ ಗೆಲವು ಸಾಧಿಸಿದೆ. ವಿಶ್ವಕಪ್ ಪಂದ್ಯದಲ್ಲಿ ಭಾರತ ಸತತ ಐದು ಗೆಲವು ಸಾಧಿಸಿದ್ದು, ದಾಖಲೆ ಸೃಷ್ಟಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ಭಾರತಕ್ಕೆ 260 ರನ್‌ಗಳ ಸವಾಲೊಡ್ಡಿತ್ತು. 49 ಓವರ್‌ಗಳಲ್ಲಿ ಐರ್ಲೆಂಡ್‌ನ್ನು ಭಾರತ ಆಲೌಟ್ ಮಾಡಿತ್ತು.

260 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ಆರಂಭದಲ್ಲಿಯೇ ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆ ಹುಟ್ಟಿಸಿತ್ತು. ಆರಂಭಿಕ ದಾಂಡಿಗರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 174 ರನ್‌ಗಳ ಉತ್ತಮ ಜತೆಯಾಟ ಆಕರ್ಷಣೀಯವಾಗಿತ್ತು. ಆದರೆ 24ನೇ ಓವರ್‌ನಲ್ಲಿ ಥಾಮ್‌ಸನ್ ಎಸೆತಕ್ಕೆ ರೋಹಿತ್ ಬೌಲ್ಡ್ ಆಗುವ ಮೂಲಕ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ರೋಹಿತ್ ನಂತರ ಕೊಹ್ಲಿ ಕ್ರೀಸ್‌ಗಿಳಿದು ಧವನ್‌ಗೆ ಸಾಥ್ ನೀಡಿದರು. ಅಷ್ಟೊತ್ತಿನಲ್ಲಿ ಧವನ್ 85 ಎಸೆತಗಳನ್ನೆದುರಿಸಿ ಭರ್ಜರಿ ಶತಕ ಸಿಡಿಸಿದರು. ಧವನ್ ವಿಶ್ವಕಪ್‌ನಲ್ಲಿ ಸಿಡಿಸಿದ ಎರಡನೇ ಶತಕ ಇದಾಗಿದೆ. ಶತಕ ಸಿಡಿಸಿದ ಕೆಲವೇ ಕ್ಷಣಗಳಲ್ಲಿ ಥಾಮ್‌ಸನ್ ಧವನ್ ವಿಕೆಟ್ ಕೂಡಾ ಕಸಿದುಕೊಂಡರು.

ಮೊದಲ ಎರಡು ವಿಕೆಟ್‌ಗಳನ್ನು ಭಾರತ ಕಳೆದುಕೊಂಡಾಗ 28ನೇ ಓವರ್‌ನಲ್ಲಿ ಭಾರತದ ಸ್ಕೋರ್ 190 ಆಗಿತ್ತು. ಧವನ್ ನಂತರ ಕ್ರೀಸ್‌ಗಿಳಿದ ರೆಹಾನೆ ಕೊಹ್ಲಿಗೆ ಉತ್ತಮ ಸಾಥ್ ನೀಡಿದ್ದು, ಇವರಿಬ್ಬರ ಸಮಯೋಜಿತ ಆಟ ಭಾರತಕ್ಕೆ ಗೆಲುವು ತಂದುಕೊಟ್ಟಿತು.

42 ಬಾಲ್‌ಗಳೆನ್ನೆದುರಿಸಿದ ಕೊಹ್ಲಿ  44 ರನ್ ಮತ್ತು ಅಜೆಂಕ್ಯಾ ರೆಹಾನೆ  33ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, 37 ನೇ ಓವರ್‌ನಲ್ಲಿ ಭಾರತ ಗುರಿ ತಲುಪಿದೆ.

ಐರ್ಲೆಂಡ್ ಪರವಾಗಿ ಥಾಮ್ ಸನ್ 2  ವಿಕೆಟ್ ಪಡೆದಿದ್ದಾರೆ. ಶತಕ ದಾಖಲಿಸಿದ ಶಿಖರ್ ಧವನ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com