ಗಪ್ಟಿಲ್ ದಾಖಲೆ ದ್ವಿಶತಕ, 393 ರನ್ ಗಳ ಬೃಹತ್ ಮೊತ್ತ ಪೇರಿಸಿದ ನ್ಯೂಜಿಲೆಂಡ್

ಮಾರ್ಟಿನ್ ಗಪ್ಟಿಲ್ ಅವರ ಆಕರ್ಷಕ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ 393 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿದೆ...
ದ್ವಿಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್
ದ್ವಿಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್
Updated on

ವೆಲ್ಲಿಂಗ್ ಟನ್: ಮಾರ್ಟಿನ್ ಗಪ್ಟಿಲ್ ಅವರ ಆಕರ್ಷಕ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ 393 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿದೆ.

ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯ ನಾಲ್ಕನೇ ಕ್ವಾರ್ಟರ್ ಫೈನಲ್ ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿತು. ನಾಯಕ ಮೆಕ್ಕಲಮ್ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಡಿದ ನ್ಯೂಜಿಲೆಂಡ್  ಬ್ಯಾಟ್ಸಮನ್ ಗಳು ಉತ್ತಮವಾಗಿ ಆಡಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಮೆಕ್ಕಲಮ್ ಮತ್ತು ಮಾರ್ಟಿನ್ ಗಪ್ಟಿಲ್ ತಂಡಕ್ಕೆ ಉತ್ತಮ ಆರಂಭ ನೀಡುವ ಭರವಸೆ ಮೂಡಿಸಿದರಾದರೂ, ತಂಡದ ಮೊತ್ತ 27 ರನ್ ಗಳಾಗಿದ್ದಾಗ ಮೆಕ್ಕಲಮ್ ಟೇಲರ್ ಗೆ ವಿಕೆಟ್ ಒಪ್ಪಿಸಿದರು. ಆಗ ಅವರು ಕೇವಲ 12 ರನ್ ಗಳಿಸಿದ್ದರು.

ಬಳಿಕ ಬಂದ ಕ್ರೀಸ್ ಗೆ ಬಂದ ವಿಲಿಯಮ್ಸನ್ ಅವರು ಮಾರ್ಟಿನ್ ಗಪ್ಟಿಲ್ ಅವರ ಜೊತೆಗೂಡಿ ನ್ಯೂಜಿಲೆಂಡ್ ತಂಡದ ರನ್ ಗಳಿಕೆ ವೇಗವನ್ನು ಹೆಚ್ಚಿಸ ತೊಡಗಿದರು. ಭರ್ಜರಿ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿಯನ್ನು ರಸೆಲ್ ಅವರು ಬೇರ್ಪಡಿಸಿದರು. 33 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಿಲಿಯಮ್ಸನ್ ರಸೆಲ್ ಅವರ ಎಸೆತವನ್ನು ತಪ್ಪಾಗಿ ಆರ್ಥೈಸಿಕೊಂಡು ಗೇಯ್ಲ್ ಕ್ಯಾಚಿತ್ತು ಹೊರನಡೆದರು. ಬಳಿಕ ಗಪ್ಟಿಲ್ ಅವರನ್ನು ಸೇರಿಕೊಂಡ ಟೇಲರ್ ವಿಂಡೀಸ್ ಬೌಲರ್ ಗಳನ್ನು ಕಾಡಿದರು. ಭರ್ಜರಿ 143 ರನ್ ಗಳ ಜೊತೆಯಾಟ ವಾಡಿದ ಈ ಜೋಡಿ ತಂಡಕ್ಕೆ ಬೃಹತ್ ಮೊತ್ತ ಪೇರಿಸುವ ಕುರಿತು ಸೂಚನೆ ನೀಡಿದರು. ಈ ವೇಳೆ ಇಲ್ಲದ ರನ್ ಕದಿಯಲು ಹೋಗಿ ಟೇಲರ್ ರನ್ ಔಟ್ ಗೆ ಬಲಿಯಾದರು.

ಆಗ ಅವರ ವೈಯುಕ್ತಿಕ ಮೊತ್ತ 42 ರನ್ ಗಳಾಗಿತ್ತು. ಈ ಹೊತ್ತಿಗಾಗಲೇಮಾರ್ಟಿನ್ ಗಪ್ಟಿಲ್ ಶತಕ ಸಿಡಿಸಿ ಮುನ್ನುಗ್ಗಿದರು. ಬಳಿಕ ಬಂದ ಮಧ್ಯಮ ಕ್ರಮಾಂಕದ ಆಟಗಾರರು ಗಪ್ಟಿಲ್ ಗೆ ಉತ್ತಮ ಸಾಥ್ ನೀಡಲಿಲ್ಲವಾದರೂ. ದೃತಿಗೆಡದ ಗಪ್ಟಿಲ್ ವೆಸ್ಟ್ ಇಂಡೀಸ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಅವರು ಕೇವಲ 223 ಎಸೆತಗಳಲ್ಲಿ 237 ರನ್ ಸಿಡಿಸಿದರು. ಔಟಾಗದೇ ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿದ್ದ ಗಪ್ಟಿಲ್ ನ್ಯೂಜಿಲೆಂಡ್ ತಂಡದ ಬೃಹತ್ ಮೊತ್ತಕೆ ಕಾರಣರಾದರು. ನಿಗದಿತ 50 ಓವರ್ ಗಳಲ್ಲಿ ನ್ಯೂಜಿಲೆಂಡ್ ತಂಡ ಕೇವಲ 6 ವಿಕೆಟ್ಗಳನ್ನು ಕಳೆದುಕೊಂಡು ಬರೊಬ್ಬರಿ 393 ರನ್ ಗಳನ್ನು ಸಿಡಿಸಿದೆ. ಆ ಮೂಲಕ ವೆಸ್ಟ್ ಇಂಡೀಸ್ ಗೆ ಗೆಲ್ಲಲು 394 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ.

ಗಪ್ಟಿಲ್ ದಾಖಲೆ
ಇನ್ನು ಈ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮಾರ್ಟಿನ್ ಗಪ್ಟಿಲ್ ದಾಖಲೆಯ ಪುಟ ಸೇರಿದ್ದು, ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ನ್ಯೂಜಿಲೆಂಡ್ ನ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ವೆಸ್ಟ್ ಇಂಡೀಸ್ ಆರಂಭಿಕ ಆಘಾತ
ಇನ್ನು ಇತ್ತೀಚಿನ ವರದಿಗಳು ಬಂದಾಗ ಗುರಿಯನ್ನು ಬೆನ್ನುಹತ್ತಿರುವ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತ ಅನುಭವಿಸಿದ್ದು, ಚಾರ್ಲ್ಸ್ ಮತ್ತು ಸಿಮಾನ್ಸ್ ಅವರ ವಿಕೆಟ್ ಅನ್ನು ಕಳೆದುಕೊಂಡಿದೆ. ಪ್ರಸ್ತುತ 7 ಓವರ್ ಗಳಲ್ಲಿ ವಿಂಡೀಸ್ ತಂಡ 2 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಗಳಿಸಿದೆ.  ದೈತ್ಯ ಕ್ರಿಸ್ ಗೇಯ್ಲ್  ಮತ್ತು ಸ್ಯಾಮುಯೆಲ್ಸ್ ಅವರು ಆಟವಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com