ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯದ ಫಲಿತಾಂಶ ವಿಶ್ವದಾದ್ಯಂತ ಇರುವ ಭಾರತೀಯ ತಂಡದ ಅಭಿಮಾನಿಗಳ ಆಸೆಯನ್ನು ಮಣ್ಣುಪಾಲು ಮಾಡಿದೆ. ಅತ್ತ, ಸಿಡ್ನಿ ಕ್ರೀಡಾಂಗಣದ ಶೇ. 70ರಷ್ಟು ಆಸನಗಳು ಟೀಂ ಇಂಡಿಯಾ ಅಭಿಮಾನಿಗಳೇ ತುಂಬಿ ಕೊಂಡಿದ್ದರು. ಅಲ್ಲಿನ ಬಾರ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲೂ ಭಾರತ ತಂಡದ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.
ಪಂದ್ಯದ ದಿನವಾದ ಗುರುವಾರವಂತೂ ಇಡೀ ದೇಶವೇ ಟೀಂ ಇಂಡಿಯಾ ಜಪದಲ್ಲಿ ಮುಳುಗಿಹೋಗಿತ್ತು.ಆದರೆ, ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ಕೂಡಲೇ ಕೋಟ್ಯಾನುಕೋಟಿ ಜನರು ಮುಖ ಪೆಚ್ಚಾದವು. ಮಾತುಗಳು ಮಾಯವಾದವು. ಎಲ್ಲೆಡೆ ಭಾರವಾದ ಹೆಜ್ಜೆಗಳನ್ನಿಡುತ್ತಾ ಅಭಿಮಾನಿಗಳು ಮನೆಗಳತ್ತ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
Advertisement