ರೈಡರ್ಸ್ ಗೆ ಜಯ ತಂದ ಪಿಯೂಷ್

ಸ್ಪಿನ್ನರ್ ಪಿಯೂಶ್ ಚಾವ್ಲಾ ಅವರ ಬೌಲಿಂಗ್ ಗೆ ತತ್ತರಿಸಿದ್ದ ಡೆಲ್ಲಿ ಡೇವಿಲ್ ತಂಡ, ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ನೈಡರ್ಸ್
ಪಿಯೂಶ್ ಚಾವ್ಲಾ
ಪಿಯೂಶ್ ಚಾವ್ಲಾ

ಕೋಲ್ಕತಾ: ಸ್ಪಿನ್ನರ್ ಪಿಯೂಶ್ ಚಾವ್ಲಾ ಅವರ ಬೌಲಿಂಗ್ ಗೆ ತತ್ತರಿಸಿದ್ದ ಡೆಲ್ಲಿ ಡೇವಿಲ್ ತಂಡ, ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ನೈಡರ್ಸ್ ವಿರುದ್ಧದ ಪಂದ್ಯದಲ್ಲಿ 13 ರನ್ ಗಳ ಪರಾಭವ ಹೊಂದಿತು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಕ್ರೀಸ್ ಗೆ ಇಳಿದ ಕೋಲ್ಕೋತಾ ನೈಟ್ ರೈಡರ್ಸ್ ಸಾಧಾರಣ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ ಹಾಗೂ ಗೌತಮ್ ಗಂಭೀರ್ ಮೊದಲ ವಿಕೆಟ್ ಗೆ 27 ಎಸೆತಗಳಲ್ಲಿ 38 ರನ್ ಸೇರಿಸಿದರು. ಆದರೆ ಐದನೇ ಓವರ್ ನಲ್ಲಿ ಗಂಭೀರ್ ಔಟಾಗುವ ಮೂಲಕ ಈ ಜೋಡಿ ಮುರಿಯಿತು.  ಅಲ್ಲಿಂದ ಮೂರನೇ ಕ್ರಮಾಂಕದ ಮನೀಶ್ ಪಾಂಡೆ ಜೊತೆಗೆ 2ನೇ ವಿಕೆಟ್ ಗೆ 26 ರನ್ ಸೇರಿಸಿದ ರಾಬಿನ್, 9ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಗಟ್ಟಿಯಾದ ಜೊತೆಯಾಟ ಹೊರಬರಲಿಲ್ಲ. 3ನೇ ವಿಕೆಟ್ ಗೆ ಜೊತೆಯಾಗಿದ್ದ ಪಾಂಡೆ ಹಾಗೂ ಪಿಯೂಶ್ ಚಾವ್ಲಾ ಕೇವಲ 19 ರನ್ ಮಾತ್ರ ಸೇರಿಸಿತು. 12ನೇ ಓವರ್ ನಲ್ಲಿ  ಪಾಂಡೆ ಔಟಾಗುವುದರೊಂದಿಗೆ ಈ ಜೋಡಿ ಮುರಿಯಿತು.  ಈ ಹಂತದಲ್ಲಿ ಕ್ರೀಸ್ ಗೆ ಕಾಲಿಟ್ಟ ಯೂಸೂಫ್ ಪಠಾಣ್. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡವು ಉತ್ತಮ ಮೊತ್ತ ಗಳಿಸಲು ನೆರವಾದರು.
ಕೋಲ್ಕೋತಾ ನೀಡಿದ್ದ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಮನೀಶ್ ತಿವಾರಿ ಹಾಗೂ ಶ್ರೇಯಸ್ ಅಯ್ಯರ್ 63 ರನ್ ಸೇರಿಸಿದರು. ಆದರೆ 10ನೇ ಓವರ್ ನಲ್ಲಿ ತಿವಾರಿ ವಿಕೆಟ್ ಉರುಳುವ ಮೂಲಕ ಈ ಜೋಡಿ ಮುರಿದು ಬಿತ್ತು. ಈ ವಿಕೆಟ್ ಪಡೆದಿದ್ದು ಪಿಯೂಶ್ ಚಾವ್ಲಾ, ಅಲ್ಲಿಂದ ಮುಂದಕ್ಕೆ ನಿಗದಿತ ಅವಧಿಯಲ್ಲಿ ಡೆಲ್ಲಿ ವಿಕೆಟ್ ಚೆಲ್ಲುತ್ತಾ ಸಾಗಿತು. ಭರವಸೆಯ ಆಟಗಾರರಾದ ಡುಮಿನಿ  ಕೇದಾರ್ ಜಾಧವ್ ಕ್ರಮವಾಗಿ 25.10 ರನ್ ಗಳಿಸಿ ಪೆವಿಲಿಯನ್ ಗೆ ಮರಳಿಸಿದರೆ, ಯುವರಾಜ್ ಸಿಂಗ್ ಡಕ್ ಔಟ್ ಆದರು. ಈ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಚಾವ್ಲಾ ಡೆಲ್ಲಿ ತಂಡಕ್ಕೆ ಪೆಟ್ಟು ನೀಡಿದರು.
ಇಲ್ಲಿಂದ ಮುಂದಕ್ಕೆ ಬಂದ ಯಾರೋಬ್ಬರು ಹೆಚ್ಚು ಆಡಲಿಲ್ಲ. 6ನೇ ವಿಕೆಟ್ ಗೆ ಜೊತೆಯಾದ ಆ್ಯಂಜೆಲೋ ಮ್ಯಾಥ್ಯೂಸ್ ಹಾಗೂ ಸೌರಭ್ ತಿವಾರಿ 32 ರನ್ ಸೇರಿಸಿತು. ಈ ಜೋಡಿ ಮುರಿದ ಮೇಲೆ ತಂಡ ಸೋಲಿನ ಹಾದಿಯತ್ತ ಸರಿಯಿತು. ಅಂತಿಮವಾಗಿ ಡೆಲ್ಲಿ ತಂಡ 158 ರನ್ ಮಾತ್ರ ಗಳಿಸಿತು.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com