
ಹೈದ್ರಾಬಾದ್: ಆಸ್ಟ್ರೇಲಿಯಾ ಮೂಲದ ಡೇವಿಡ್ ವಾರ್ನರ್ ಹಾಗೂ ವೇಗಿ ಮೋಯಿಸ್ ಹೆನ್ರಿಕ್ಸ್ ಅವರ ಆಕ್ರಮಣಕ್ಕೆ ತುತ್ತಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ವಿರುದಟಛಿ 5 ರನ್‍ಗಳ ಪರಾಭವ ಕಂಡಿತು. ಈ ಪಂದ್ಯದಲ್ಲಿನ ಜಯದ ಮೂಲಕ, ಸನ್‍ರೈಸರ್ಸ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ಹಂತಕ್ಕೆ ಕಾಲಿಡುವ
ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ತಂಡ, 20 ಓವರ್ ಗಳಲ್ಲಿ 5 ವಿಕೆಟ್‍ಗೆ 185 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್, 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಮಾತ್ರ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಇಳಿದ ಸನ್‍ರೈಸರ್ಸ್‍ಗೆ ನೆರವಾದ ಡೇವಿಡ್ ವಾರ್ನರ್ ಇನಿಂಗ್ಸ್‍ಗೆ ಉತ್ತಮವಾಗಿ ನೆರವಾದರು. ಮತ್ತೊಬ್ಬ ಆರಂಭಿಕ ಶಿಖರ್ ಧವನ್ ಜೊತೆಗೂಡಿ 6.1 ಓವರ್‍ಗಳಲ್ಲಿ 54 ರನ್ ಪೇರಿಸಿದ ಅವರು, ಆನಂತರ ಮೂರನೇ ಕ್ರಮಾಂಕದ ಹೆನ್ರಿಕ್ಸ್ ಜೊತೆಗೂಡಿ 65 ರನ್ ಪೇರಿಸಿದರು. 14ನೇ ಓವರ್‍ನಲ್ಲಿ ಹೆನ್ರಿಕ್ಸ್ ವಿಕೆಟ್ ಉರುಳಿದ ನಂತರ ಕ್ರೀಸ್‍ಗೆ ಬಂದ ಮೋರ್ಗನ್ ಆರ್ಭಟಿಸಿದರು. ಆದರೆ, ಈ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 3ನೇ ವಿಕೆಟ್‍ಗೆ 19 ರನ್ ಪೇರಿಸುವಷ್ಟರಲ್ಲಿ ಮೋರ್ಗನ್ ವಿಕೆಟ್ ಒಪ್ಪಿಸಿ ಹೊರನಡೆದರು.
ಇದಾದ ಮೇಲೆ ಬಂದ ನಮನ್ ಓಜಾ ಜೊತೆಗೂಡಿ 4ನೇ ವಿಕೆಟ್‍ಗೆ 17 ರನ್ ಸೇರಿಸಿದ ವಾರ್ನರ್ (81 ರನ್, 52 ವಿಕೆಟ್, 6 ಬೌಂಡರಿ, 5 ಸಿಕ್ಸರ್), ಇನಿಂಗ್ಸ್‍ನ 18ನೇ ಓವರ್‍ನಲ್ಲಿ ಹೆಂಡ್ರಿಕ್ಸ್‍ಗೆ ವಿಕೆಟ್ ಬ್ಯುರಾನ್ ಹೆಂಡ್ರಿಕ್ಸ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಆಗ ತಂಡದ ಮೊತ್ತ 157 ರನ್. ಅದೇ ಮೊತ್ತಕ್ಕೆ ಓಜಾ ವಿಕೆಟ್ ಸಹ ಉರುಳಿತು. ಇದಾದ ನಂತರ
ಜೊತೆಯಾದ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಕರ್ಣ್ ಶರ್ಮಾ ಜೋಡಿ ಮುರಿಯದ 6ನೇ ವಿಕೆಟ್‍ಗೆ 16 ಎಸೆತಗಳಲ್ಲಿ 28 ರನ್ ಸೇರಿಸಿ, ತಂಡದ ಮೊತ್ತವನ್ನು 185ಕ್ಕೆ ತಂದರು. ಪಂಜಾಬ್ ಪರ ಹೆಂಡ್ರಿಕ್ಸ್ ಅವರು, 2 ವಿಕೆಟ್ ಗಳಿಸಿದರೆ, ಗುರುಕೀರತ್ ಸಿಂಗ್ ಹಾಗೂ ಮಾಕ್ಸ್ಮೆಲ್ ತಲಾ ಒಂದು ವಿಕೆಟ್ ಗಳಿಸಿದರು. ಸನ್‍ರೈಸರ್ಸ್ ತಂಡ ನೀಡಿದ್ದ ಸವಾಲನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಆರಂಭಿಕರಾದ ಮುರಳಿ ವಿಜಯ್ ಹಾಗೂ ಮನನ್ ವೊಹ್ರಾ ಮೊದಲ ವಿಕೆಟ್ ಗೆ 42 ರನ್‍ಗಳ ಜೊತೆಯಾಟವಾಡಿದರು. ಆದರೆ, ಬಿಪುಲ್ ಶರ್ಮಾ ಈ ಇಬ್ಬರನ್ನೂ ಕ್ರಮವಾಗಿ 5ನೇ ಹಾಗೂ 7ನೇ ಓವರ್‍ನಲ್ಲಿ ಹೊರಗಟ್ಟಿ ತಂಡಕ್ಕೆ ಪಂಜಾಬ್‍ಗೆ ಮೊದಲ ಪೆಟ್ಟು ನೀಡಿದರು. ಆದರೆ, ನಂತರ ಬಂದ ವೃದ್ಧಿಮಾನ್ ಸಾಹ ಮತ್ತು ಗ್ಲೆನ್ ಮಾಕ್ಸವೆಲ್ ಹೆಚ್ಚು ಆಡದೇ ಕೇವಲ ಒಂದಂಕಿ ರನ್ ಗಳಿಸಿ ಹೊರನಡೆದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಡೇವಿಡ್ ಮಿಲ್ಲರ್ ವೀರೋದಾತ್ತ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಅವರಿಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಪಂದ್ಯ ಮುಗಿಯುವವರೆಗೂ ಅಜೇಯರಾಗುಳಿದ ಅವರು, 89 ರನ್ ಗಳಿಸಿದರು. ಹೈದರಾಬಾದ್ ಪರ ಹೆನ್ರಿಕ್ಸ್ 3 ವಿಕೆಟ್ ಗಳಿಸಿದರು
Advertisement