
ನವದೆಹಲಿ: ಚಾಂಪಿಯನ್ಸ್ ಲಿಗ್ ಟಿ -20 ನಿರೀಕ್ಷೆಗೆ ತಕ್ಕಂತೆ ಕ್ರೀಡಾಭಿಮಾನಿಗಳನ್ನು ಸೆಳೆಯುತ್ತಿಲ್ಲವಾದ್ದರಿಂದ ಸಿಎಲ್‌ಟಿ ಲೀಗ್ ಟಿ -20 ನ್ನು ಬದಲಾವಣೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.
ಬಿಸಿಸಿಐ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡರೆ, ಯುಎಇಯಲ್ಲಿ ಸೆಪ್ಟೆಂಬರ್ ವೇಳೆಗೆ, ಐಪಿಎಲ್ ನ ಮಿನಿ ಪಂದ್ಯಾವಳಿ ನಡೆಯುವ ಸಾಧ್ಯತೆ ಇದೆ.
ಪ್ರಸಕ್ತ ಐಪಿಎಲ್ ಪಂದ್ಯಾವಳಿ ಅಂತ್ಯಗೊಳ್ಳುವುದರೊಳಗೆ, ಸಿಎಲ್‌ಟಿ ಟಿ -20 ಸ್ವರೂಪದಲ್ಲಿ ಬದಲಾವಣೆ ಮಾಡುವ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಸಿಸಿಐ ಅದಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಐಪಿಎಲ್ ನಿಂದ ಟಾಪ್ ನಾಲ್ಕು ತಂಡಗಳನ್ನು ಆಯ್ಕೆ ಮಾಡಿ ಅವುಗಳ ನಡುವೆ ಹೊಸ ಪಂದ್ಯಾವಳಿಗಳನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದ್ದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸಿಎಲ್‌ಟಿ -20-ಕ್ರಿಕೆಟ್ ಆಸ್ಟ್ರೆಲಿಯ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ನ ಜಂಟಿ ಮಾಲಿಕರಿಗೆ ಈ ವಿಷಯ ತಿಳಿಸಿದ್ದಾರೆ.
ಸಿಎಲ್‌ಟಿ -20 ನಿರೀಕ್ಷೆಗೆ ತಕ್ಕಂತೆ ಕ್ರೀಡಾಭಿಮಾನಿಗಳನ್ನು ಸೆಳೆಯುತ್ತಿಲ್ಲ, ಅದರಿಂದಾಗಿ ಯಾವುದೇ ಉದ್ದೇಶ ಈಡೆರಲಿಲ್ಲ, ಬಿಸಿಸಿಐ ನ ನೂತನ ಯೋಜನೆ ಐಪಿಎಲ್ 2 ಕ್ರೀಡಾಭಿಮಾನಿಗಳನ್ನು ಹೆಚ್ಚು ಆಕರ್ಷಿಸುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement