ಸನ್ ರೈಸರ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ: ಪ್ಲೇ ಆಫ್ ಕನಸು ಜೀವಂತ
ಬೆಂಗಳೂರು: ಸನ್ ರೈಸರ್ಸ್ ಹೈದ್ರಾಬಾದ್ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಭರ್ಜರಿ ಜಯ ದಾಖಲಿಸಿದ್ದು, ಪ್ಲೇ ಆಫ್ ಕನಸನ್ನು ಜೀವಂತ ಇರಿಸಿಕೊಂಡಿದೆ.
ಮಳೆಯ ಕಾರಣ ಪಂದ್ಯ ಲೇಟಾಗಿ ಪ್ರಾರಂಭಗೊಂಡಿತ್ತು. ಹೀಗಾಗಿ ಪಂದ್ಯವನ್ನು 11 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೊಡಿ ಬಡಿ ಆಟದ ಮೂಲಕ 11 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ವಾರ್ನರ್ ಹಾಗೂ ಹೆನ್ರಿಕ್ಸನ್ ಇಬ್ಬರು ತಲಾ ಅರ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾದರು.
ಆರ್ಸಿಬಿ ಬ್ಯಾಟಿಂಗೂ ಮುನ್ನ ಮತ್ತೆ ಮಳೆ ಬಂದ ಕಾರಣ ಡಕ್ ವರ್ತ್ ಲೂಯಿಸ್ನಿಯಮಾನುಸಾರ 6 ಓವರ್ ಗಳಿಗೆ 81 ರನ್ಗಳ ಟಾರ್ಗೆಟ್ ನೀಡಲಾಯಿತು. ಈ ಮೊತ್ತವನ್ನು ಬೆನ್ನತ್ತಿದ ಕೊಹ್ಲಿ ಪಡೆ ಬಿರುಸಿನ ಆಟವಾಡಿತು. ಆರಂಭದಲ್ಲಿ ಕ್ರಿಸ್ ಗೇಯ್ಲ್ ಬಿರುಸಿನ ಆಟವಾಡಿದರು. 35 ರನ್ ಗಳಿಸಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಔಟಾದ್ರು. ನಂತರ ಬಂದ ಎಬಿ ಡಿವಿಲಿಯರ್ಸ್ ಕೂಡ ಔಟಾಗಿದ್ದು, ತಂಡಕ್ಕೆ ಭಾರಿ ಹೊಡೆತ ಬಿದ್ದಿತ್ತು. ಈ ನಡುವೆ ತಂಡ ಆಸರೆಯಾಗಿದ್ದು, ನಾಯಕ ವಿರಾಟ್ ಕೊಹ್ಲಿ,
ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ ಬಿರುಸಿನ ಹೊಡೆತಗಳಿಂದ 19 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿ ಜಯ ತಂದುಕೊಟ್ಟರು.
ಈ ಗೆಲುವಿನ ಮೂಲಕ ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿದ್ದು, ಪ್ಲೇ ಆಫ್ ಪ್ರವೇಶಿಸೋದು ಬಹುತೇಕ ಖಚಿತವಾಗಿದೆ. ಆದರೆ ಇವತ್ತಿನ ಪಂದ್ಯಗಳ ಫಲಿತಾಂಶ ಹಾಗೂ ನಾಳೆಯ ಆರ್ ಸಿಬಿ ಪಂದ್ಯ ಪ್ಲೇ ಆಪ್ ಪ್ರವೇಶವನ್ನು ಖಚಿತಪಡಿಸಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ