ಏಕದಿನಕ್ಕೆ ಹ್ಯಾಡಿನ್ ವಿದಾಯ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ರಾಡ್ ಹ್ಯಾಡಿನ್ ಏಕದಿನ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ...
ಬ್ರಾಡ್  ಹ್ಯಾಡಿನ್
ಬ್ರಾಡ್ ಹ್ಯಾಡಿನ್

ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ರಾಡ್ ಹ್ಯಾಡಿನ್ ಏಕದಿನ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಇತ್ತೀಚೆಗಷ್ಚೆ ನಡೆದ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಬ್ರಾಡ್ ಹ್ಯಾಡಿನ್, ಏಕದಿನ ಮಾದರಿಗೆ ಅಂತ್ಯವಾಡಲು ನಿರ್ಧರಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದ ಪರ ಟೆಸ್ಟ್ ಪಂದ್ಯದಲ್ಲಿ ಮುಂದುವರಿಯಲು 37 ವರ್ಷದ ಹ್ಯಾಡಿನ್ ನಿರ್ಧರಿಸಿದ್ದಾರೆ.

ಮೂರು ಏಕದಿನ ವಿಶ್ವಕಪ್ ತಂಡದಲ್ಲಿ ಆಡಿ, ಈಗ ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗಿದ್ದು ಅದೃಷ್ಟದ ಸಂಗತಿ. ಈಗ ಈ ಮಾದರಿಗೆ ವಿದಾಯ ಹೇಳಲು ಸೂಕ್ತ ಸಮಯವಾಗಿದೆ. ಸಾಕಷ್ಟು ಕ್ರಿಕೆಟಿಗರಿಗೆ ಈ ರೀತಿಯಾದ ವಿದಾಯ ಹೇಳಲು ಅವಕಾಶ ಸಿಗುವುದಿಲ್ಲ. ಅದರಲ್ಲೂ ವಿಶ್ವಕಪ್ ನ್ನು ತವರಿನ ಅಂಗಳದಲ್ಲಿ ಗೆಲ್ಲುವುದು ಮತ್ತೊಂದು ವಿಶೇಷ. ಈಗ ಆಸ್ಟ್ರೇಲಿಯಾ ತಂಡ ಏಕದಿನ ಕ್ರಿಕೆಟ್ ನಲ್ಲಿ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದೆ. ಹಾಗಾಗಿ ಈಗ ವಿದಾಯ ಹೇಳಲು ಅದೃಷ್ಟದ ಸಂಗತಿಯಾಗಿದೆ ಎಂದು ಹ್ಯಾಡಿನ್ ತಿಳಿಸಿದರು.

2001ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರೆಕೆಟ್ ಗೆ ಪಾದಾರ್ಪಣೆ ಮಾಡಿದ ಹ್ಯಾಡಿನ್, ಆಸ್ಟ್ರೇಲಿಯಾದ ದಂತಕಥೆ ಆ್ಯಡಂ ಗಿಲ್ ಕ್ರಿಸ್ಟ್ ನಿವೃತ್ತಿ ನಂತರ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದರು. 126 ಪಂದ್ಯಗಳನ್ನಾಡಿರುವ ಹ್ಯಾಡಿನ್, 31.53ರ ಸರಾಸರಿಯಲ್ಲಿ 2 ಶತಕ ಸೇರಿದಂತೆ 3122 ರನ್ ದಾಖಲಿಸಿದ್ದಾರೆ. ಇನ್ನು ವಿಕೆಟ್ ನ ಹಿಂದೆ 181 ಔಟ್ ಗಳಲ್ಲಿ ಭಾಗಿಯಾಗಿದ್ದು, ಆಸ್ಟ್ರೇಲಿಯಾ ಪರ ಮೂರನೇ ಗರಿಷ್ಠ ಸಾಧನೆ ಮಾಡಿದ್ದಾರೆ. ಅಗ್ರ ಎರಡು ಸ್ಥಾನದಲ್ಲಿ ಆ್ಯಡಂ ಗಿಲ್ ಕ್ರಿಸ್ಟ್ (472) ಹಾಗೂ ಇಯಾನ್ ಹೀಲಿ (233) ಕಾಣಿಸಿಕೊಂಡಿದ್ದಾರೆ.

ಬ್ರಾಡ್  ಹ್ಯಾಡಿನ್ ನಿವೃತ್ತಿ ಹಿನ್ನೆಲೆಯಲ್ಲಿ ಅವರಿಗೆ ಶುಭ ಹಾರೈಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಜೇಮ್ಸ್ ಸದರ್ಲೆ ಂಡ್ , ಬ್ರಾಡ್ ಹ್ಯಾಡಿನ್ ಅವರ ಅತ್ಯುತ್ತಮ ಏಕದಿನ ವೃತ್ತಿ ಜೀವನದ ವಿದಾಯಕ್ಕೆ ಶುಭಕೋರುತ್ತೇವೆ. ಸೀಮಿತ ಓವರ್  ಕ್ರಿಕೆಟ್ ನಲ್ಲಿ ಅವರು ಅತ್ಯುತ್ತಮ ಆಟಗಾರನಾಗಿ ಆಸ್ಟ್ರೇಲಿಯಾ ತಂಡಕ್ಕೆ ಕಾಣಿಕೆ ನೀಡಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ಕ್ರೆಕೆಟ್ ನ ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ಸ್ಥಾನವನ್ನು ತುಂಬಲು ಯುವ ಆಟಗಾರರಿಗೆ ಅವಕಾಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಬ್ರಾಡ್ ಪ್ರತಿ ಬಾರಿ ಕಣಕ್ಕಿಳಿಯುತ್ತಿದ್ದಾಗ ಸಂಪೂರ್ಣ ಪ್ರಯತ್ನ ಮಾಡುತ್ತಿದ್ದರು. ಅವರ ಸಾಧನೆ ಹೆಮ್ಮೆ ಪಡುವಂತಹದ್ದು. ಅವರ ಸೇವೆಗೆ ಧವ್ಯವಾದ ತಿಳಿಸುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com