ಸಿಡ್ನಿ: ವಿಶ್ವದ ನಂಬರ್ 1 ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಚೀನಾದ ವಾಂಗ್ ಶಿಕ್ಸಿಯಾನ್ ಅವರ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದಿದ್ದಾರೆ.
ಹಾಲಿ ಚಾಂಪಿಯನ್ ಕೂಡ ಆಗಿರುವ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರಿಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶುಕ್ರವಾರ ಚೀನದ ವಾಂಗ್ ಶಿಕ್ಸಿಯಾನ್ ಅವರೆದುರು 21-15, 21-13 ನೇರ ಸೆಟ್ ಗಳ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 5ನೇ ಕ್ರಮಾಂಕದ ವಾಂಗ್ ಅವರು ಪಂದ್ಯದ ಆರಂಭದಿಂದಲೂ ಬಿಗಿ ಹಿಡಿತ ಹೊಂದಿದ್ದರು.
ಪಂದ್ಯದ ಯಾವುದೇ ಹಂತದಲ್ಲಿಯೂ ಸೈನಾ ಅವರಿಗೆ ಮೇಲೇಳುವ ಅವಕಾಶ ನೀಡಲೇ ಇಲ್ಲ. ಹೀಗಾಗಿ ಅಂತಿಮವಾಗಿ 21-15, 21-13, ಅಂತರದಲ್ಲಿ 2ನೇ ಶ್ರೇಯಾಂಕದ ಭಾರತೀಯ ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ವಿರುದ್ಧ ವಾಂಗ್ ಶಿಕ್ಸಿಯಾನ್ ವಿಜಯವನ್ನು ಸಾಧಿಸಿದರು.
42 ನಿಮಿಷಗಳ ಕಾಲ ನಡೆದ ಈ ಹೋರಾಟದಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ತಮ್ಮ ಎಂದಿನ ಆಕ್ರಮಣಕಾರಿ ಆಟ ಪ್ರದರ್ಶಿಸದೇ ಬರೊಬ್ಬರಿ 8 ಸೆಟ್ ಗಳಲ್ಲಿ ಪರಾಜಿತರಾದರು. ಸೈನಾ ಅವರ ಸೋಲಿನೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ಸವಾಲು ಕೊನೆಗೊಂಡಂತಾಗಿದೆ. ಉಳಿದ ಭಾರತೀಯ ಆಟಗಾರರು ಸಿಡ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಮುನ್ನವೇ ಪರಾಜಿತರಾಗಿದ್ದಾರೆ.
Advertisement