ಓಮನ್ ವಿರುದ್ಧ ಭರ್ಜರಿ ಜಯ, ಮುಂದುವರೆದ ಕಿರಿಯರ ಜೈತ್ರಯಾತ್ರೆ

ಪ್ರಚಂಡ ಫಾರ್ಮ್ ನಲ್ಲಿರುವ ಭಾರತದ ಕಿರಿಯ ಪುರುಷರ ಹಾಕಿ ತಂಡ ಜೂನಿಯರ್ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಮತ್ತೊಂದು ಗೆಲುವು ಸಾಧಿಸಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕುಂಟಾನ್: ಪ್ರಚಂಡ ಫಾರ್ಮ್ ನಲ್ಲಿರುವ ಭಾರತದ ಕಿರಿಯ ಪುರುಷರ ಹಾಕಿ ತಂಡ ಜೂನಿಯರ್ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಮತ್ತೊಂದು ಗೆಲುವು ಸಾಧಿಸಿದ್ದು ತನ್ನ  ಅಜೇಯ ಓಟವನ್ನು ಮುಂದುವರೆಸಿದೆಯಲ್ಲದೆ, ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದೆ.

ಹರ್ಮನ್‍ಪ್ರೀತ್ ಸಿಂಗ್ ದಾಖಲಿಸಿದ ಹ್ಯಾಟ್ರಿಕ್ ಗೋಲಿನ ನೆರವಿನೊಂದಿಗೆ ಗುರುವಾರ  ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 9-0 ಗೋಲುಗಳ ಅಮೋಘ ಗೆಲುವು ಸಾಧಿಸಿತು. ಅಂದಹಾಗೆ ಈ ಪಂದ್ಯಾವಳಿಯಲ್ಲಿ ಭಾರತ ಸತತ ನಾಲ್ಕು ಗೆಲುವು ಕಂಡಂತಾಗಿದ್ದು, ಇದೀಗ ನಾಳೆ ನಡೆಯಲಿರುವ ಸೆಮಿಫೈನಲ್ ನಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.

`ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ, ಮೊದಲಿಗೆ ಜಪಾನ್ ವಿರುದ್ಧ (2-1), ಆತಿಥೇಯ  ಮಲೇಷಿಯಾ ವಿರುದ್ಧ (5-4) ಹಾಗೂ ಚೀನಾ ವಿರುದ್ಧ 4-1 ಗೋಲುಗಳಿಂದ ವಿಜೃಂಭಿಸಿತ್ತು.  ಇನ್ನು ಬಿ ಗುಂಪಿನಲ್ಲಿ ಕೊನೆಯ ಸ್ಥಾನ ಅಲಂಕರಿಸಿದ್ದ ದುರ್ಬಲ ಓಮನ್ ವಿರುದ್ಧವೂ  ಏಕಪಕ್ಷೀಯ ಪ್ರದರ್ಶನ ನೀಡಿದ ಭಾರತದ ಕಿರಿಯರ ತಂಡ, ಪಂದ್ಯದಾದ್ಯಂತ ಪಾರಮ್ಯ  ಮೆರೆಯಿತು. ನಾಯಕ ಪ್ರೀತ್ ಸಿಂಗ್ 7 ಮತ್ತು 12ನೇ ನಿಮಿಷದಲ್ಲಿ ಅರ್ಮಾನ್ ಖುರೇಷಿ  ಗೋಲು ಹೊಡೆದರು. ಆ ಬಳಿಕ ಗುರ್ಮಂತ್ ಸಿಂಗ್ (18 ನಿ.), ಸಾಂಟಾ ಸಿಂಗ್ (22 ನಿ.)  ಮತ್ತು ಮನ್ ದೀಪ್  ಸಿಂಗ್ ಜೂನಿಯರ್ 30ನೇ ನಿಮಿಷದಲ್ಲಿ  ಗೋಲು ಬಾರಿಸಿದ್ದು  ಪ್ರಥಮಾರ್ಧದಲ್ಲೇ ಭಾರತ 6-0 ಪ್ರಾಬಲ್ಯ ಮೆರೆಯಲು ಕಾರಣವಾಯಿತು. ತೃತೀಯ  ಕ್ವಾರ್ಟರ್ ನಲ್ಲಿ ನಾಯಕ ಹರ್ಜೀತ್ ಸಿಂಗ್ ಗೋಲು ಹೊಡೆದರೆ, 50ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಮ್ಮೆ ಓಮನ್ ಗೋಲಿಯನ್ನು ವಂಚಿಸಿದರು. ಇದಾದ ನಾಲ್ಕು  ನಿಮಿಷಗಳ ಅಂತರದಲ್ಲೇ ಮೊಹಮ್ಮದ್ ಉಮರ್ ಭಾರತದ ಪರ  9ನೇ ಗೋಲು ಹೊಡೆದು ತಂಡದ ಅಮೋಘ ಗೆಲುವಿನಲ್ಲಿ ಪಾಲುದಾರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com