ಕಿರಿಯರ ಏಷ್ಯಾ ಕಪ್ ಹಾಕಿ: ಹರ್ಮನ್ ಹಾರಾಟ, ಪಾಕ್ ಪರದಾಟ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಮೆರೆದ ಭಾರತ ಕಿರಿಯರ ಹಾಕಿ ತಂಡ 19 ವರ್ಷದವರ 8ನೇ ಏಷ್ಯಾಕಪ್ ಟೂರ್ನಿಯನ್ನು ಗೆದ್ದುಕೊಂಡಿದೆ.
ಏಷ್ಯಾಕಪ್ ಟೂರ್ನಿ
ಏಷ್ಯಾಕಪ್ ಟೂರ್ನಿ

ಕುಂಟಾನ್: ಸಿಕ್ಕ ಪೆನಾಲ್ಟಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಪಂದ್ಯದ ಆರಂಭದಿಂದ ಅಂತಿಮ ಕ್ಷಣದವರೆಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಮೆರೆದ ಭಾರತ ಕಿರಿಯರ ಹಾಕಿ ತಂಡ 19 ವರ್ಷದವರ 8ನೇ ಏಷ್ಯಾಕಪ್ ಟೂರ್ನಿಯನ್ನು ಗೆದ್ದುಕೊಂಡಿದೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 6-2 ಗೋಲುಗಳ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯಿತು. ಭಾರತ ತಂಡದ ಪರ ಹರ್ಮನ್ ಪ್ರೀತ್ ಸಿಂಗ್ (10 ,15 , 30 , 53 ನೇ) ಅರ್ಮಾನ್ ಖುರೇಶಿ (44ನೇ) ಮತ್ತು ಮನ್‍ಪ್ರೀತ್ (50ನೇ) ನಿಮಿಷದಲ್ಲಿ ಗೋಲು ದಾಖಲಿಸಿದರು. ಪಾಕಿಸ್ತಾದ ಪರ ಯಾಕೂಬ್ ಮೊಹಮದ್ (28 ) ನೇ ಮತ್ತು ಮೊಹಮದ್ ದಿಲ್ಬರ್ (68 ) ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಟೂರ್ನಿಯಲ್ಲಿ ಸೋಲರಿಯದ ತಂಡವಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದ ಭಾರತ ತಂಡ ಈ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ಮುಂದುವರಿಸಿತು. ಪಂದ್ಯದ ಆರಂಭಿಕ ಹಂತದಿಂದಲೇ ಆಕ್ರಮಣಕಾರಿ ದಾಳಿ ನಡೆಸಿದ ಭಾರತ ಸಂಘಟಿತ ಪ್ರದರ್ಶನ ನೀಡಿತು. ಪಂದ್ಯದ 10ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಹರ್ಮನ್‍ಪ್ರೀತ್ ಸಿಂಗ್, ಭಾರತದ ಗೋಲು ಖಾತೆಯನ್ನು ತೆರೆದರು. ನಂತರ 15ನೇ
ನಿಮಿಷದಲ್ಲಿ ಎರಡನೇ ಬಾರಿಗೆ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಹರ್ಮನ್‍ಪ್ರೀತ್ ತಂಡಕ್ಕೆ ಮತ್ತೊಂದು ಗೋಲು ದಾಖಲಿಸಿ, ಪಾಕಿಸ್ತಾನದ ಮೇಲೆ ಒತ್ತಡ ಹೇರಲು ನೆರವಾದರು.
ನಂತರ ಪ್ರತಿರೋಧ ನೀಡುವ ಪ್ರಯತ್ನ ನಡೆಸಿದ ಪಾಕಿಸ್ತಾನ ತಂಡ 28ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಮೊದಮದ್ ಯಾಕೂಬ್ ಗೋಲು ದಾಖಲಿಸಿ ತಂಡದ ಅಂತರವನ್ನು ಕಡಿಮೆ ಮಾಡಿದರು. ಪಂದ್ಯದ 30ನೇ ನಿಮಿಷದಲ್ಲಿ ಮತ್ತೆ ಪೆನಾಲ್ಟಿ ಮೂಲಕ ಗೋಲು ದಾಖಲಿಸಿದ ಹರ್ಮನ್ ಪ್ರೀತ್ ಸಿಂಗ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಆ ಮೂಲಕ ಭಾರತ ತಂಡ ಪಂದ್ಯದ ಮೊದಲ ಅವಧಿಯಲ್ಲಿ 3-1 ಗೋಲುಗಳ ಅಂತರವನ್ನು ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲೂ ಪರದಾಟ: ಪಂದ್ಯದ ಮೊದಲ ಅವಧಿಯಲ್ಲೇ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ತಂಡ, ದ್ವಿತೀಯ ಅವಧಿಯಲ್ಲಿ ನಿಯಂತ್ರಣ ಸಾಧಿಸಲು ಪ್ರಯತ್ನ ನಡೆಸಿತಾದರೂ ಸಾಧ್ಯವಾಗಲಿಲ್ಲ. ಪಂದ್ಯದ 44ನೇ ನಿಮಿಷದಲ್ಲಿ ಅರ್ಮಾನ್ ಖುರೇಶಿ ಅವರು ದಾಖಲಿಸಿದ ಫೀಲ್ಡ್ ಗೋಲಿನ ಮೂಲಕ ಭಾರತ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com