ಮನೀಶ್, ವಿನಯ್ ಮಿಂಚು

ರಾಜ್ಯ ತಂಡದ ಸ್ಟಾರ್ ಕ್ರಿಕೆಟಿಗ ಮನೀಶ್ ಪಾಂಡೆ (81: 141 ಎಸೆತ, 13 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಆರ್. ವಿನಯ್ ಕುಮಾರ್ (50: 60 ಎಸೆತ, 9 ಬೌಂಡರಿ) ದಾಖಲಿಸಿದ...
ದೆಹಲಿ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿದ ಮನೀಶ್ ಪಾಂಡೆಯ ಬ್ಯಾಟಿಂಗ್ ಶೈಲಿ
ದೆಹಲಿ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿದ ಮನೀಶ್ ಪಾಂಡೆಯ ಬ್ಯಾಟಿಂಗ್ ಶೈಲಿ
Updated on

ಹುಬ್ಬಳ್ಳಿ: ರಾಜ್ಯ ತಂಡದ ಸ್ಟಾರ್ ಕ್ರಿಕೆಟಿಗ ಮನೀಶ್ ಪಾಂಡೆ (81: v141 ಎಸೆತ, 13    ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಆರ್. ವಿನಯ್ ಕುಮಾರ್ (50: 60  ಎಸೆತ, 9 ಬೌಂಡರಿ) ದಾಖಲಿಸಿದ ಅರ್ಧಶತಕಗಳ ನೆರವಿನೊಂದಿಗೆ ಆತಿಥೇಯ ಕರ್ನಾಟಕ ಪ್ರವಾಸಿ ದೆಹಲಿ ತಂಡದ ವಿರುದ್ಧದ `ಎ' ಗುಂಪಿನ ರಣಜಿ ಪಂದ್ಯದಲ್ಲಿ ತನ್ನ ಮೊದಲ  ಇನ್ನಿಂಗ್ಸ್‍ನಲ್ಲಿ 542 ರನ್‍ಗಳಿಗೆ ಆಲೌಟ್ ಆಯಿತು.

ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಬಿsಸಿದ ದೆಹಲಿ 29 ಓವರ್‍ಗಳಲ್ಲಿ 1 ವಿಕೆಟ್‍ಗೆ 60 ರನ್  ಳಿಸಿತ್ತು. ಆರಂಭಿಕ ಉನ್ಮುಕ್ತ್ ಚಾಂದ್ (22) ವೇಗಿ ಶ್ರೀನಾಥ್ ಅರವಿಂದ್ ಬೌಲಿಂಗ್‍ನಲ್ಲಿ  ಕೆಟ್‍ಕೀಪರ್ ಸಿ.ಎಂ. ಗೌತಮ್ ಗೆ ಕ್ಯಾಚಿತ್ತು ಕ್ರೀಸ್ ತೊರೆದ ಬಳಿಕ ಧ್ರುವ ಶೋರೆ (4)
ಯನ್ನು ಕೂಡಿಕೊಂಡ ನಾಯಕ ಗೌತಮ್ ಗಂಭೀರ್ 33 ರನ್ ಗಳಿಸಿ ಹೋರಾಟ  ಮುಂದುವರೆಸಿದ್ದರು.

ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿರುವ ಕರ್ನಾಟಕ ಇದರ ಲಾಭ ಪಡೆಯಲು ಇದೀಗ  ಬೌಲಿಂಗ್‍ನಲ್ಲಿ ಮಿಂಚಬೇಕಿದೆ. ಮೊದಲ ಹಂತದಲ್ಲಿ ಅಪಾಯಕಾರಿ ಆಟಗಾರ ಉನ್ಮುಕ್ತ್ ಚಾಂದ್‍ಗೆ  ಪೆವಿಲಿಯನ್ ದಾರಿ ತೋರಿರುವ ಕರ್ನಾಟಕದ ಬೌಲರ್‍ಗಳಿಗೆ ಮೂರನೇ ದಿನ  ಮಹತ್ವಪೂರ್ಣವೆನಿಸಿದೆ. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ, ಗುಂಪಿನಲ್ಲಿ ತಂಡವನ್ನು ಅಗ್ರಸ್ಥಾನದಲ್ಲಿರಿಸುವ ಮಹತ್ತರ ಹೊಣೆಗಾರಿಕೆಯೂ ಗಂಭೀರ್ ಹೆಗಲೇರಿದ್ದು, ಈ ಹಿನ್ನೆಲೆಯಲ್ಲಿ  ಮೂರನೇ ದಿನದಾಟ ಕೌತುಕ ಕೆರಳಿಸಿದೆ. 

ವಿನಯ್ ಆಕರ್ಷಕ ಆಟ: ಮೊದಲ ದಿನದಂದು 3 ವಿಕೆಟ್‍ಗೆ 358 ರನ್ ಗಳಿಸಿ ಬೃಹತ್  ಮೊತ್ತದ ಗುರಿ ಹೊತ್ತಿದ್ದ ಕರ್ನಾಟಕ ನಿರೀಕ್ಷಿತ ಗುರಿ ಮುಟ್ಟುವಲ್ಲಿ ತಕ್ಕಮಟ್ಟಿಗೆ  ಯಶಸ್ವಿಯಾಯಿತು. ಆದಾಗ್ಯೂ ತಲಾ 31 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್  ಕಾಯ್ದುಕೊಂಡಿದ್ದ ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ಜೋಡಿ ತಮ್ಮ ಮೇಲಿನ    ನಿರೀಕ್ಷೆಯನ್ನು ಹುಸಿ ಮಾಡಿತು. ಕೇವಲ 8 ರನ್ ಗಳಿಸುವಷ್ಟರಲ್ಲೇ ಪ್ರದೀಪ್ ಸಂಗ್ವಾನ್‍ಗೆ ಬೌಲ್ಡ್ ಆದ ಕರುಣ್ ನಾಯರ್ ತ್ವರಿತಗತಿಯಲ್ಲಿಯೇ ಕ್ರೀಸ್ ತೊರೆದರು. ಬಳಿಕ ಬಂದ ವಿಕೆಟ್‍ಕೀಪರ್  ಸಿ.ಎಂ. ಗೌತಮ್ (37) ಜತೆಗೆ ಹೋರಾಟ ಮುಂದುವರೆಸಿದ ಮನೀಶ್ ಪಾಂಡೆ ದೆಹಲಿ  ಬೌಲರ್‍ಗಳ ದಾಳಿಯನ್ನು ಸಮರ್ಥವಾಗಿ ನಿರ್ವಹಿಸಿ ಅರ್ಧಶತಕ ಪೂರೈಸಿದರು.  ಆದರೆ   ಭೋಜನ ವಿರಾಮಕ್ಕೆ ಸ್ವಲ್ಪ ಸಮಯವಿರುವಾಗ ಪ್ರದೀಪ್‍ಗೆ ಬೌಲ್ಡ್ ಆಗಿ ಅವರು ಕ್ರೀಸ್  ತೊರೆದರು. ತದನಂತರದ ಬೆಳವಣಿಗೆಯಲ್ಲಿ ಹೇಳಿಕೊಳ್ಳುವಂತೆ ಬ್ಯಾಟಿಂಗ್ ನಡೆಸಿದ್ದು ವಿನಯ್  ಕುಮಾರ್ ಮಾತ್ರ ಆಕರ್ಷಕ ಆಟವಾಡಿದ ವಿನಯ್ ಅರ್ಧಶತಕದ ನಂತರ ಮನನ್ ಶರ್ಮಾ  ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಆಗಿ ಕ್ರೀಸ್ ತೊರೆದರು. ಆದರೆ, ಅವರ ಈ ದಿಟ್ಟ ಬ್ಯಾಟಿಂಗ್ ನಿಂದಾಗಿಯೇ ಕರ್ನಾಟಕ 500 ರನ್‍ಗಳ ಗಡಿ ದಾಟಲು ಸಾಧ್ಯವಾಯಿತು.

ದೆಹಲಿ ಪರ ಪ್ರದೀಪ್ ಸಂಗ್ವಾನ್ ಮತ್ತು ನವದೀಪ್ ಸೈನಿ ತಲಾ 3 ವಿಕೆಟ್ ಗಳಿಸಿದರೆ, ಪವನ್  ಯಾಲ್ ಹಾಗೂ ಮನನ್ ಶರ್ಮಾ ತಲಾ 2 ವಿಕೆಟ್ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com