ಸುರಕ್ಷತೆ ಕಾಳಜಿ ತಂದ ಹ್ಯೂಸ್

ಕ್ರಿಕೆಟ್ ಜಗತ್ತು ಎಂದಿಗೂ ಮರೆಲಾಗದ ದುರ್ದಿನ ನವೆಂಬರ್ 27, 2014. ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟಿಗ ಫಿಲಿಪ್ ಹ್ಯೂಸ್, ಸಿಡ್ನಿ ಕ್ರೀಡಾಂಗಣದಲ್ಲಿ ಸ್ಥಳೀಯ ತಂಡದ ಪರ ಆಡುತ್ತಿರುವಾಗ ಪ್ರಾಣ ತೆತ್ತಿದ್ದರು...
ಫಿಲಿಪ್ ಹ್ಯೂಸ್ ಗೆ ಪೆಟ್ಟಾದ ಸಂದರ್ಭ (ಸಂಗ್ರಹ ಚಿತ್ರ)
ಫಿಲಿಪ್ ಹ್ಯೂಸ್ ಗೆ ಪೆಟ್ಟಾದ ಸಂದರ್ಭ (ಸಂಗ್ರಹ ಚಿತ್ರ)

ಸಿಡ್ನಿ: ಕ್ರಿಕೆಟ್ ಜಗತ್ತು ಎಂದಿಗೂ ಮರೆಲಾಗದ ದುರ್ದಿನ ನವೆಂಬರ್ 27, 2014. ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟಿಗ ಫಿಲಿಪ್ ಹ್ಯೂಸ್, ಸಿಡ್ನಿ ಕ್ರೀಡಾಂಗಣದಲ್ಲಿ ಸ್ಥಳೀಯ ತಂಡದ ಪರ ಆಡುತ್ತಿರುವಾಗ ಪ್ರಾಣ ತೆತ್ತಿದ್ದರು.

ಇದೇ ಶುಕ್ರವಾರ, ಹ್ಯೂಸ್ ಗತಿಸಿ ಒಂದು ವರ್ಷ ಕಳೆದಿದೆ. ವೇಗದ ಬೌಲರ್ ಸೀನ್ ಅಬಾಟ್ ಬೌಲಿಂಗ್ ದಾಳಿಯನ್ನೆದುರಿಸಲು ಹೋಗಿ ಚೆಂಡು ಕುತ್ತಿಗೆಗೆ ಬಡಿದ ಕಾರಣದಿಂದ ಮೈದಾನದಲ್ಲಿಯೇ ಕುಸಿದುಬಿದ್ದ ಬಿದ್ದ ಅವರು ಮೆದುಳಿನಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದ ಮೂರು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಅಸುನೀಗಿದ್ದರು. ಅವರ ಈ ಸಾವು ಕ್ರಿಕೆಟಿಗರ ಸುರಕ್ಷತೆಯ ಬಗ್ಗೆ ಹುಟ್ಟುಹಾಕಿದ್ದ ಅನೇಕ ಪ್ರಶ್ನೆಗಳು ಅವರ ಮೊದಲ ಪುಣ್ಯಸ್ಮರಣೆಯ ಈ ವೇಳೆಯಲ್ಲೂ ಮಾರ್ದನಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com