ಭಾರತೀಯ ಕ್ರಿಕೆಟ್ ಅನ್ನು 5 ವರ್ಷ ಹಿಂದಕ್ಕೆ ಹಾಕಿದ ಚಾಪೆಲ್: ಸಚಿನ್ ಕಿಡಿ

ಮಾಜಿ ಕ್ರಿಕೆಟಿಗ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಭಾರತೀಯ ಕ್ರಿಕೆಟ್ ಅನ್ನು ತಮ್ಮ ವ್ಯರ್ಥ ನಿರ್ಧಾರಗಳಿಂದಾಗಿ 5 ವರ್ಷ ಹಿಂದಕ್ಕೆ ಹಾಕಿದರು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹೇಳಿದ್ದಾರೆ...
ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್, ಸಚಿನ್ ತೆಂಡೂಲ್ಕರ್ ಮತ್ತು ಇಯಾನ್ ಚಾಪೆಲ್
ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್, ಸಚಿನ್ ತೆಂಡೂಲ್ಕರ್ ಮತ್ತು ಇಯಾನ್ ಚಾಪೆಲ್

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಭಾರತೀಯ ಕ್ರಿಕೆಟ್ ಅನ್ನು ತಮ್ಮ ವ್ಯರ್ಥ ನಿರ್ಧಾರಗಳಿಂದಾಗಿ 5 ವರ್ಷ ಹಿಂದಕ್ಕೆ ಹಾಕಿದರು ಎಂದು  ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹೇಳಿದ್ದಾರೆ.

ಗ್ರೇಗ್ ಚಾಪೆಲ್ ಕೋಚ್ ಆದ ಬಳಿಕ ಭಾರತ ಕ್ರಿಕೆಟ್ ತಂಡದಲ್ಲಿ ಆದ ದಢೀರ್ ಬದಲಾವಣೆಗಳ ಕುರಿತು ತಮ್ಮ ಜೀವನಚರಿತ್ರೆ ಪುಸ್ತಕ  ಪ್ಲೇಯಿಂಗ್ ಇಟ್ ಮೈ ವೇ (Playing It My  Way)ದಲ್ಲಿ ಬರೆದಿರುವ ಸಚಿನ್, ಗ್ರೇಗ್ ಚಾಪೆಲ್ ರ ದೂರದೃಷ್ಟಿ ಇಲ್ಲದ ನಿರ್ಧಾರಗಳನ್ನು ಖಂಡಿಸಿದ್ದಾರೆ. ಅಂತೆಯೇ ಗ್ರೇಗ್ ಚಾಪೆಲ್ ಸಹೋದರ ಮತ್ತು ಆಸ್ಟ್ರೇಲಿಯಾದ ಮಾಜಿ  ಕ್ರಿಕೆಟಿಗ ಇಯಾನ್ ಚಾಪೆಲ್ ರನ್ನು ಡರ್ಬನ್ ನ ಜಿಮ್ ನಲ್ಲಿ ಭೇಟಿಯಾಗಿ ಗ್ರೇಗ್ ವಿರುದ್ಧ ಸಚಿನ್ ವಿರೋಧ ವ್ಯಕ್ತಪಡಿಸಿದ್ದ ಕ್ಷಣಗಳ ಕುರಿತ ಮಾಹಿತಿಯನ್ನು ಸಚಿನ್ ತಮ್ಮ ಪುಸ್ತಕದಲ್ಲಿ  ದಾಖಲಿಸಿದ್ದಾರೆ.

ಡರ್ಬನ್ ನ ಜಿಮ್ ವೊಂದರಲ್ಲಿ ಸಚಿನ್ ವರ್ಕ್ಔಟ್ ಮಾಡುತ್ತಿದ್ದ ವೇಳೆ ಕನ್ನಡಿ ನೋಡುತ್ತಾ ನಿಂತಿದ್ದರು. ಈ ವೇಳೆ ಜಿಮ್ ಗೆ ಆಗಮಿಸಿದ ಇಯಾನ್ ಚಾಪೆಲ್ ಸಚಿನ್ ರನ್ನು ನೋಡಿ,  ಸಚಿನ್ ಅವರ ಯಶಸ್ಸಿನ ಗುಟ್ಟು ತನಗೆ ಈಗ ತಿಳಿಯಿತು ಎಂದು ಹೇಳುತ್ತಾರೆ. ಆಗ ಸಿಟ್ಟಿನಿಂದ ತಿರುಗಿದ ಸಚಿನ್, ನೀವು ಸಹೋದರರು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನ್ನು  ಬದಲಾಯಿಸುತ್ತೀರಿ.  ಭಾರತೀಯ ಕ್ರಿಕೆಟ್ ನಲ್ಲಿ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿದ್ದೇ ನಿಮ್ಮ ಸಹೋದರ ಗ್ರೇಗ್ ಚಾಪೆಲ್. ಅವರ ತಪ್ಪು ನಿರ್ಧಾರಗಳಿಂದಾಗಿ ಭಾರತೀಯ ಕ್ರಿಕೆಟ್ 5 ವರ್ಷಗಳಷ್ಟು  ಹಿಂದುಳಿಯುವಂತಾಯಿತು ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಸಚಿನ್ ತಮ್ಮ ಆತ್ಮ ಚರಿತ್ರೆಯಲ್ಲಿ ಗ್ರೇಗ್ ಚಾಪೆಲ್ ರನ್ನು ರಿಂಗ್ ಮಾಸ್ಟರ್ ಎಂದು ಕರೆದಿದ್ದಾರೆ. ತಮ್ಮ ಇದೇ ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕದಲ್ಲಿ ಸಚಿನ್ ಗ್ರೇಗ್ ಚಾಪೆಲ್ ಹೇಗೆ  ತಮ್ಮ ಸಿದ್ಧಾಂತಗಳನ್ನು ಆಟಗಾರರ ಮೇಲೆ ಬಲವಂತವಾಗಿ ಹೇರುತ್ತಿದ್ದರು ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ ತಮ್ಮ ಇಡೀ ವೃತ್ತಿ ಜೀವನದಲ್ಲಿ ಮಾಜಿ ಕ್ರಿಕೆಟಿಗರ ವಿರುದ್ಧ ವಾಗ್ವಾದ ನಡೆಸದ  ಸಚಿನ್ ಗೆ ಗ್ರೇಗ್ ಹೇಗೆ ಕಾಟ ನೀಡುತ್ತಿದ್ದರು ಮತ್ತು ಬ್ಯಾಟಿಂಗ್ ನಲ್ಲಿ ವಿಫಲನಾದಾಗ ತಮ್ಮನ್ನು ಹೇಗೆ ಕಾಣುತ್ತಿದ್ದರು ಎಂಬಿತ್ಯಾದಿ ಅಂಶಗಳನ್ನು ಸಚಿನ್ ವಿವರಿಸಿದ್ದು, ಅದಕ್ಕೆ ತಮ್ಮ ಬ್ಯಾಟ್  ನಿಂದಲೇ ಹೇಗೆ ಉತ್ತರಿಸಿದರು ಎಂಬುದನ್ನು ಸಚಿನ್ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com