
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವನಿತೆಯರ ಕ್ರಿಕೆಟ್‍ನ ರ್ಯಾಂಕಿಂಗ್ ಪಟ್ಟಿಯ ನೂತನ ಪಟ್ಟಿಯಲ್ಲಿ ಭಾರತ ಮಹಿಳೆಯರ ಕ್ರಿಕೆಟ್ ತಂಡ ನಾಲ್ಕನೇ ಸ್ಥಾನ ಅಲಂಕರಿಸಿದೆ.
ಇತ್ತೀಚೆಗಿನ ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ಫಲಿತಾಂಶವನ್ನಾಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆಯೆಂದು ಐಸಿಸಿ ಹೇಳಿದೆ. ಒಟ್ಟು 134 ಅಂಕ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡ ಪಟ್ಟಿಯ ಮೊದಲ ಸ್ಥಾನದಲ್ಲಿದ್ದು ಇಂಗ್ಲೆಂಡ್ (124 ಅಂಕ) ಎರಡನೇ ಸ್ಥಾನದಲ್ಲಿದೆ.
ಆನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್ (109), ಭಾರತ (105), ವೆಸ್ಟ್ ಇಂಡೀಸ್ (99), ದಕ್ಷಿಣ ಆಫ್ರಿಕಾ (92), ಪಾಕಿಸ್ತಾನ (81), ಶ್ರೀಲಂಕಾ (74), ಬಾಂಗ್ಲಾದೇಶ (57) ಹಾಗೂ ಐರ್ಲೆಂಡ್ (26) ತಂಡಗಳಿವೆ.
Advertisement