ಕೋಚ್ ಹುದ್ದೆ ತ್ಯಜಿಸಿದ ಜಡೇಜಾ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಯ್ ಜಡೇಜಾ ದೆಹಲಿ ತಂಡದ ಕೋಚ್ ಸ್ಥಾನದಿಂದ...
ಅಜಯ್ ಜಡೇಜಾ
ಅಜಯ್ ಜಡೇಜಾ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಯ್ ಜಡೇಜಾ ದೆಹಲಿ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಈ ಋತು ವಿನಲ್ಲಿ (2015-16) ತಂಡವನ್ನು ಮುನ್ನಡೆಸಲು ಆಯ್ಕೆಯಾಗಿದ್ದ ಜಡೇಜಾ, ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಕಾದಾಡುತ್ತಿರುವ ದೆಹಲಿ ತಂಡದ ಜತೆಗೆ ತೆರಳಲು ಹಿಂದೇಟು ಹಾಕಿದ್ದರು.

``ನನ್ನೀ ನಿರ್ಣಯವಾಗಲೀ ಇಲ್ಲವೇ ಅಭಿಪ್ರಾಯವಾಗಲಿ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ ದೊಡ್ಡದಾಗಿ ಕಾಣಿಸುವುದಿಲ್ಲ ಎಂದೇ ನಾನು ನಂಬುತ್ತೇನೆ. ಹಾಗೆಯೇ ದೆಹಲಿ ತಂಡಕ್ಕೆ ಶುಭ ಕೋರುತ್ತೇನೆ'' ಎಂದು ಜಡೇಜಾ ಹೇಳಿದ್ದಾರೆ. ಈ ಸ್ಥಾನಕ್ಕೆ ಭಾರತದ ಮಾಜಿ ವಿಕೆಟ್‍ಕೀಪರ್ ವಿಜಯ್ ದಹಿಯಾ ಆಯ್ಕೆಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com