ಬಿಸಿಸಿಐ ವಿರುದ್ಧದ ಅರ್ಜಿ ಹಿಂಪಡೆದ ಶ್ರೀನಿವಾಸನ್

ಬಿಸಿಸಿಐ ವಿರುದ್ಧ ಎನ್ ಶ್ರೀನಿವಾಸನ್ ದಾಖಲಿಸಿದ್ದ ಅರ್ಜಿಯನ್ನು ಅವರ ಪರ ವಕೀಲ ಕಪಿಲ್ ಸಿಬಲ್ ಅವರು ಸೋಮವಾರ ಹಿಂದಕ್ಕೆ ಪಡೆದಿದ್ದಾರೆ...
ಶ್ರೀನಿವಾಸನ್ ಮತ್ತು ಬಿಸಿಸಿಐ (ಸಂಗ್ರಹ ಚಿತ್ರ)
ಶ್ರೀನಿವಾಸನ್ ಮತ್ತು ಬಿಸಿಸಿಐ (ಸಂಗ್ರಹ ಚಿತ್ರ)

ನವದೆಹಲಿ: ಬಿಸಿಸಿಐ ವಿರುದ್ಧ ಎನ್ ಶ್ರೀನಿವಾಸನ್ ದಾಖಲಿಸಿದ್ದ ಅರ್ಜಿಯನ್ನು ಅವರ ಪರ ವಕೀಲ ಕಪಿಲ್ ಸಿಬಲ್ ಅವರು ಸೋಮವಾರ ಹಿಂದಕ್ಕೆ ಪಡೆದಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಳಿಕ ಶ್ರೀನಿವಾಸನ್ ಅವರು ಬಿಸಿಸಿಐ ಸಭೆಗಳಲ್ಲಿ ಪಾಲ್ಗೊಳ್ಳುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು. ಹೀಗಾಗಿ ಶ್ರೀನಿವಾಸನ್ ಸಭೆಯಲ್ಲಿ  ಪಾಲ್ಗೊಳ್ಳಬಾರದು ಎಂದು ಬಿಸಿಸಿಐ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಇದರ ವಿರುದ್ಧ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರೂ ಕೂಡ ಅರ್ಜಿಯೊಂದನ್ನು ದಾಖಲಿಸಿದ್ದರು.  ಕ್ರಿಕೆಟ್ ಸಂಸ್ಥೆ ತಪ್ಪು ಮಾಹಿತಿ ನೀಡುತ್ತಿದ್ದು, ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಾನೂ ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಯಾವುದೇ ಆದೇಶ ನೀಡಿಲ್ಲ ಎಂದು ತಮ್ಮ ವಾದ ಮಂಡಿಸಿದ್ದರು.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯ ವಿರುದ್ಧ ಕಿಡಿಕಾರಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯ ತನ್ನ ಆದೇಶ ನೀಡಿದೆ. ಪ್ರತಿಯೊಂದಕ್ಕೂ  ಕೋರ್ಟ್ ಮೆಟ್ಟಿಲೇರುವ ಗುಣವನ್ನು ಬಿಡಿ. ಅಲ್ಲದೆ ಕ್ರಿಕೆಟ್ ಸಂಸ್ಥೆ ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳಬೇಕು ಎಂದು ಬಿಸಿಸಿಐಗೆ ಸಲಹೆ ನೀಡಿತ್ತು.

ಸುಪ್ರೀಂ ಕೋರ್ಟ್ ನ ಈ ವಿಚಾರಣೆಯ ಬೆನ್ನ ಹಿಂದೆಯೇ ಎನ್ ಶ್ರೀನಿವಾಸನ್, ಚಾಂಪಿಯನ್ಸ್ ಲೀಗ್ ಟೂರ್ನಿಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಶ್ರೀನಿವಾಸನ್ ಪರ ವಕೀಲ ಕಪಿಲ್  ಸಿಬಲ್ ಅವರು ಇಂದು ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com