38 ವರ್ಷಗಳ ಬಳಿಕ ಕೋಲ್ಕತಾಗೆ ಪೀಲೆ, ಅಭಿಮಾನಿಗಳಿಂದ ಭವ್ಯ ಸ್ವಾಗತ

ಬ್ರೆಜಿಲ್ ಫುಟ್ಬಾಲ್ ದಂತಕತೆ ಪೀಲೆ ಭಾನುವಾರ ಕೋಲ್ಕತಾಗೆ ಆಗಮಿಸಿದ್ದು, 38 ವರ್ಷಗಳ ಬಳಿಕ ಇಲ್ಲಿಗೆ ಕಾಲಿಟ್ಟಿದ್ದಾರೆ. ಸೋಮವಾರ ಐತಿಹಾಸಿಕ ಈಡನ್....
ಫುಟ್ಬಾಲ್ ಆಟಗಾರ ಪೀಲೆ
ಫುಟ್ಬಾಲ್ ಆಟಗಾರ ಪೀಲೆ

ಕೊಲ್ಕೋತಾ: ಬ್ರೆಜಿಲ್ ಫುಟ್ಬಾಲ್ ದಂತಕತೆ ಪೀಲೆ ಭಾನುವಾರ ಕೋಲ್ಕತಾಗೆ ಆಗಮಿಸಿದ್ದು, 38 ವರ್ಷಗಳ ಬಳಿಕ ಇಲ್ಲಿಗೆ ಕಾಲಿಟ್ಟಿದ್ದಾರೆ. ಸೋಮವಾರ ಐತಿಹಾಸಿಕ ಈಡನ್ ಗಾರ್ಡನ್‍ನಲ್ಲಿ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಕಣಕ್ಕಿಳಿದು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಪೀಲೆ ಆಗಮನದ ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಹುಸಂಖ್ಯೆಯಲ್ಲಿ ಅಭಿಮಾನಿಗಳು
ಜಮಾಯಿಸಿದ್ದು, ಪೀಲೇ ಪೀಲೆ ಎಂದು ಕೂಗುತ್ತಾ ತಮ್ಮ ಅಭಿಮಾನ ತೋರಿದರು.

ಅಲ್ಲದೆ ಭಾರತ ಮಾಜಿ ಫುಟ್ಬಾಲ್ ಆಟಗಾರ ಚುನಿ ಗೋಸ್ವಾಮಿ ಸ್ವಾಗತಿಸಿದರು. ಭಾನುವಾರ ವಿಶ್ರಾಂತಿ ಪಡೆಯಲಿರುವ ಪೀಲೆ, ಸೋಮವಾರ ಮೋಹನ್ ಬಗಾನ್ ವಿರುದ್ಧ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಅಮೆರಿಕಾದ ನ್ಯೂಯಾರ್ಕ್ ಕಾಸ್ಮೋಸ್ ತಂಡ ನಡುವಣ ಪ್ರದರ್ಶನಪಂದ್ಯ ವೀಕ್ಷಿಸಲಿದ್ದಾರೆ.

ಸಂಜೆ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಚರ್ಚಾ ಕಾರ್ಯಕ್ರಮದಲ್ಲಿ ಬಂಗಾಳ ಕ್ರಿಕೆಟ್ ಸಂಸ್ಥೆ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಜತೆ ಭಾಗವಹಿಸಲಿದ್ದಾರೆ. ಈ ವೇಳೆ ವಿಡಿಯೋ ಕಾನ್ಪರೆನ್ಸ್ ಮೂಲಕ ಟೆನಿಸ್ ತಾರೆ ರಾಫೆಲ್ ನಡಾಲ್
ಸೇರಿಕೊಳ್ಳಲಿದ್ದಾರೆ.

ಅಲ್ಲದೆ ಭಾರತದ ಸಂಗೀತ ಲೋಕದ ದಿಗ್ಗಜ ಎ.ಆರ್. ರೆಹಮಾನ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಭಾಗವಹಿಸಲಿದ್ದಾರೆ. ಮಂಗಳವಾರ ಕೋಲ್ಕತಾದಲ್ಲಿ ನಡೆಯಲಿರುವ ಐಎಸ್‍ಎಲ್ ಟೂರ್ನಿಯಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಣ ಪಂದ್ಯದಲ್ಲಿ ಪೀಲೆ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com