ಸುಲ್ತಾನ್ ಜೊಹೊರ್ ಹಾಕಿ: ಪಾಕ್ ಮಣಿಸಿದ ಸರ್ದಾರ್ ಪಡೆ
ತಮನ್ ದಯಾ(ಮಲೇಷ್ಯಾ): ಹಾಲಿ ಚಾಂಪಿಯನ್ ಭಾರತ ಕಿರಿಯರ ಹಾಕಿ ತಂಡ ಸುಲ್ತಾನ್ ಜೊಹರ್ ಕಪ್ ಹಾಕಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಂಪಾದಿಸಿದೆ. ಭಾನುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 21 ವರ್ಷದೊಳಗಿನ ಭಾರತ 5-1 ಗೋಲುಗಳ ಅಂತರದಲ್ಲಿ ಪಾಕ್ ತಂಡವನ್ನು ಮಣಿಸಿತು.
ಆ ಮೂಲಕ ಭಾರತ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಮುಂದುವರಿಸಿದೆ. ಭಾರತ ತಂಡದ ಪರ ಅಜಯ್ ಯಾದವ್ (5), ಸುಮಿತ್ ಕುಮಾರ್ (23), ಅಮ್ರಾನ್ ಖುರೇಷಿ (27), ಪರ್ವಿಂದರ್ ಸಿಂಗ್ (34), ಸಂತಾ ಸಿಂಗ್ (60)ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಪಾಕಿಸ್ತಾನ ಪರ ಮೊಹಮದ್ ದಿಲ್ಬರ್ (45) ಏಕೈಕ ಗೋಲು ದಾಖಲಿಸಿದರು. ಭಾರತ ತಂಡ ಸೋಮವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಸೆಣಸಲಿದೆ.
ಈ ಪ್ರದರ್ಶನದಿಂದ ನಾನು ತೃಪ್ತನಾಗಿದ್ದೇನೆ. ನಮ್ಮ ತಂಡ ಬಲಿಷ್ಠವಾಗಿದೆ ಎಂದು ಹೇಳುವುದಿಲ್ಲ. ಆದರೆ, ಕ್ರಮೇಣವಾಗಿ ಬೆಳವಣಿಗೆ ಕಾಣುತ್ತಿದೆ. ಟೂರ್ನಿಗೆ ಇದು ಶುಭಾರಂಭವಾಗಿದ್ದು, ಮುಂದಿನ ಪಂದ್ಯಗಳಿಗೆ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದು ಭಾರತ ತಂಡದ ಕೋಚ್ ಹರೇಂದ್ರ ಸಿಂಗ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ