ಕಾಮನ್ವೆಲ್ತ್ ಯುವ, ಕಿರಿಯರ ಹಾಗೂ ಹಿರಿಯರ ವೇಟ್‍ಲಿಪ್ಟಿಂಗ್ ಕ್ರೀಡಾಕೂಟ

ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ 12ಕ್ಕೂ ಹೆಚ್ಚು ಪದಕಗಳು ಲಭ್ಯವಾಗಿವೆ. ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಮನ್ವೆಲ್ತ್ ಯುವ, ಕಿರಿಯರ ಹಾಗೂ ಹಿರಿಯರ ವೇಟ್ ಲಿಪ್ಟಿಂಗ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಆರಂಭ ಪಡೆದಿದೆ. ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ 12ಕ್ಕೂ ಹೆಚ್ಚು ಪದಕಗಳು ಲಭ್ಯವಾಗಿವೆ. ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಖೇನ್ ಡೇ, ಸಂಜಿತಾ ಚಾನು ಹಾಗೂ ಎಸ್. ಮೀರಾಬಾಯಿ ಚಾನು ಅವರು ಚಿನ್ನದ ಪದಕ ಗೆದ್ದರು. ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಖೇನ್ ಡೇ, 108 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ, ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 136 ಕೆಜಿ ಭಾರ ಎತ್ತುವ ಮೂಲಕ ಚಿನ್ನ ಹಾಗೂ ಟೋಟಲ್ ಎಫರ್ಟ  ವಿಭಾಗದಲ್ಲಿ 222 ಕೆಜಿ ಭಾರ ಎತ್ತಿದ್ದಕ್ಕಾಗಿ ಮತ್ತೊಂದು ಚಿನ್ನದ ಪದಕ ಗೆದ್ದರು.

ಜಾಮ್ಜಂಗ್ ಡೆರು ಅವರು, 242 107+135) ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಗೌರವ ಪಡೆದರು. ಇದಲ್ಲದೆ, ಸ್ನಾಚ್ ವಿಭಾಗ, ಕ್ಲೀನ್ ಆ್ಯಂಡ್ ಜರ್ಕ್ ವಿಭಾಗ ಹಾಗೂ ಒಟ್ಟಾರೆ ವಿಭಾಗಗಳಲ್ಲಿ ಡೆರು ಅವರು ಚಿನ್ನದ ಪದಕ ಗೆದ್ದರು.

48 ಕೆಜಿ ಹಿರಿಯರ ಮಹಿಳಾ ವಿಭಾಗದಲ್ಲಿ, ಸಂಜಿತಾ ಚಾನು, ಸ್ನಾಚ್ ವಿಭಾಗದಲ್ಲಿ 81 ಕೆಜಿ ಭಾರ ಎತ್ತಿ ಬೆಳ್ಳಿ, 101 ಕೆಜಿ ಕ್ಲೀನ್ ಆ್ಯಂಡ್ ಜರ್ಕ್‍ನಲ್ಲಿ ಚಿನ್ನ, ಎಸ್. ಮೀರಾ ಬಾಯಿ ಅವರು 81 ಕೆಜಿ ಸ್ನಾಚ್ ನಲ್ಲಿ ಚಿನ್ನ, 100 ಕೆಜಿ ಕ್ಲೀನ್ ಆ್ಯಂಡ್ ಜರ್ಕ್‍ನಲ್ಲಿ ಬೆಳ್ಳಿ ಹಾಗೂ ಒಟ್ಟಾರೆ ವಿಭಾಗಲ್ಲಿ 181 ಕೆಜಿ ಭಾರ ಎತ್ತಿ ಬೆಳ್ಳಿ ಪದಕದ ಗೌರವ ಪಡೆದರು.

 48ಕೆಜಿ ಯೂತ್ ಬಾಲಕಿಯರ ವಿಭಾಗದಲ್ಲಿ ಮೋಹಿತಿ ಚವ್ಹಾಣ್‍ಗೆ ಚಿನ್ನ, ಪೂಜಾ ಗುಪ್ತಾ ಅವರಿಗೆ ಸ್ನಾಚ್, ಕ್ಲೀನ್ ಆ್ಯಂಡ್ ಜರ್ಕ್ ಹಾಗೂ ಒಟ್ಟಾರೆ ವಿಭಾಗ ಗಳಲ್ಲಿ ಬೆಳ್ಳಿ ಲಭಿಸಿದವು. ಜೂನಿಯರ್ ಮಹಿಳಾ ವಿಭಾಗದಲ್ಲೂ 48 ಕೆಜಿ ವಿಭಾಗದಲ್ಲಿ ಅವರು ಚಿನ್ನ ಗೆದ್ದರು. ಇನ್ನು, 44 ಕೆಜಿ ಯೂತ್ ಬಾಲಕಿಯರ ವಿಭಾಗದಲ್ಲಿ, ಟಿ. ಪ್ರಿಯದರ್ಶಿನಿ ಸ್ನಾಚ್, ಕ್ಲೀನ್ ಆ್ಯಂಡ್ ಜರ್ಕ್ ಹಾಗೂ ಒಟ್ಟಾರೆ ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com