
ಹೈದರಾಬಾದ್: ಅಶಿಸ್ತಿನ ವರ್ತನೆಯಲ್ಲದೆ ತಂಡದಲ್ಲಿ ಗುಂಪುಗಾರಿಕೆ ಸೃಷ್ಟಿಸುತ್ತಿದ್ದಾರೆ ಎಂದು 9 ತಿಂಗಳು ಅಂತಾರಾಷ್ಟ್ರೀಯ ಹಾಕಿಯಿಂದ ಗುರ್ಬಾಜ್ ಸಿಂಗ್ ಅವರನ್ನು ಅಮಾನತುಗೊಳಿಸಿರುವ ಕ್ರಮವನ್ನು ಪಂಜಾಬ್ ಮತ್ತು ಚತ್ತೀಸ್‍ಗಡ ಉಚ್ಚ ನ್ಯಾಯಾಲಯವು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ಬಹುತೇಕ ಈ ಮಿಡ್‍ಫಿಲ್ಡರ್ ಮೇಲಿನ ಅಮಾನತು ತೆರವುಗೊ ಳ್ಳುವ ಸಂಭವವಿದೆ ಎಂದು ಹೇಳಲಾಗಿದೆ.
ಹಾಕಿ ಇಂಡಿಯಾ ಸಲ್ಲಿಸಿರುವ ಆಟಗಾರರ ನಡತಾ ನಿಯಮಾ ವಳಿಯು ಇಂಥದ್ದೊಂದು ಕ್ರಮಕ್ಕೆ ಆಸ್ಪದ ನೀಡದ ಹಿನ್ನೆಲೆಯಲ್ಲಿ ಗುರ್ಬಾಜ್ ಸಿಂಗ್ ಅವರ ಮೇಲಿನ ಅಮಾನತಿಗೆ ಯಾವುದೇ ಕಾರಣವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ನ್ಯಾಯಾಧೀಶ ಆರ್.ಕೆ. ಜೈನ್ ಅಭಿಪ್ರಾಯಿಸಿದರು.
ಹಾಕಿ ಇಂಡಿಯಾದಲ್ಲಿ ವೈಯಕ್ತಿವಾಗಿ ಗುರ್ಬಾಜ್ ಅವರನ್ನು ವ್ಯಕ್ತಿಯೊಬ್ಬರು ಗುರಿಯಾಗಿಸಿ ಕೊಂಡು ಅವರ ಹಾಕಿ ಬದುಕನ್ನು ಮೊಟಕುಗೊಳಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ ಎಂದೂ ಕೋರ್ಟ್ ಪರೋಕ್ಷವಾಗಿ ನರೀಂದರ್ ಬಾತ್ರಾ ವಿರುದ್ಧ ಚಾಟಿ ಬೀಸಿತು. ಅಂದಹಾಗೆ ಭಾರತದ ಪರ ಗುರ್ಬಾಜ್ ಸಿಂಗ್ 200 ಪಂದ್ಯಗಳನ್ನಾಡಿದ್ದಾರೆ.
Advertisement