
ಬೆಂಗಳೂರು: ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಕ್ರಿಕೆಟ್ ಅಸೋಸಿಯೋಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾ ಸಹಯೋಗದೊಂದಿಗೆ ಆಯೋಜಿಸಿರುವ ದಕ್ಷಿಣ ವಲಯ ಅಂಧರ ಕ್ರಿಕೆಟ್ ಪಂದ್ಯಾವಳಿ ಅ.29ರಿಂದ ಆರಂಭವಾಗಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮರ್ಥನಂ ಟ್ರಸ್ಟ್ ಸಿಇಒ ಪ್ರತೀಕ್ ಮಾಧವ್, ಗಾಂಧಿನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 10ಕ್ಕೆ ಸಂಸದ ಪಿ.ಸಿ. ಮೋಹನ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.
ಅ.31ರಂದು ಮಧ್ಯಾಹ್ನ 3.30ರಂದು ಫೈನಲ್ ನಡೆಯಲಿದೆ ಎಂದು ಅವರು ತಿಳಿಸಿದರು. ವೇಳಾಪಟ್ಟಿ: ಅ.29ರಂದು ಬೆಳಗ್ಗೆ 10ಕ್ಕೆ ಕರ್ನಾಟಕ-ಕೇರಳ, ಮಧ್ಯಾಹ್ನ 1.30ಕ್ಕೆ ಆಂಧ್ರಪ್ರದೇಶ-ತಮಿಳುನಾಡು, ಅ.30ರ ಬೆಳಗ್ಗೆ 8.30ಕ್ಕೆ ಕೇರಳ-ತೆಲಂಗಾಣ, 11.45ಕ್ಕೆ ಆಂಧ್ರಪ್ರದೇಶ-ಪಾಂಡಿಚೇರಿ, ಮಧ್ಯಾಹ್ನ 3ಕ್ಕೆ ಕರ್ನಾಟಕ-ತೆಲಂಗಾಣ, ಅ.31ರ ಬೆಳಗ್ಗೆ 8.30ಕ್ಕೆ ತಮಿಳುನಾಡು-ಪಾಂಡಿಚೇರಿ ಹಾಗೂ ಮಧ್ಯಾಹ್ನ 12ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
Advertisement