
ಮುಂಬೈ: ಮುಂದಿನ ಸಾಲಿನಲ್ಲಿ ಎಂಟು ತಂಡಗಳ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಲೀಗ್ ಪಂದ್ಯಾವಳಿ ನಿಶ್ಚಿತವಾಗಿ ಜರುಗಲಿದ್ದು ಯಾವುದೇ ಕಾರಣಕ್ಕೂ ಪ್ರಾಂಚೈಸಿಗಳು ಗೊಂದಲಕ್ಕೆ ಒಳಾಗಾಗಬೇಕಿಲ್ಲ ಎಂದು ಐಪಿಎಲ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಮತ್ತು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಆರು ಪ್ರಾಂಚೈಸಿಗಳ ಪ್ರತಿನಿಧಿಗಳನ್ನು ಸಂಧಿಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ. ಆರನೇ ಐಪಿಎಲ್ ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಿಂದಾಗಿ ಸರ್ವೋಚ್ಛ ನ್ಯಾಯಾಲಯದಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಸ್ಥಾನ ರಾಯಲ್ಸ್ ಎರಡು ವರ್ಷಗಳವರೆಗೆ ಅಮಾನತುಗೊಂಡಿದ್ದು, ಇವುಗಳ ಬದಲಿಗೆ ಹೊಸ ಎರಡು ಪ್ರಾಂಚೈಸಿಗಳಿಗಾಗಿ ನವೆಂಬರ್ 9 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯ ನಂತರ ಬಿಡ್ ಕರೆಯಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಯಪಡಿಸಿವೆ.
Advertisement